';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>ದೆಹಲಿ: ದೇಶದ ಜನರಿಗೆ ಮತ್ತೊಮ್ಮೆ ಬೆಲೆ ಏರಿಕೆ ಶಾಕ್. ಸತತವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ಜತೆ ಇದೀಗ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಹೆಚ್ಚಾಗಿದೆ. ಇರುವುದರಲ್ಲಿ ಒಂದು ಸಮಾಧಾನ ಎಂದರೆ 14.5 ಕೆಜಿಯ ಮನೆ ಬಳಕೆ ಸಿಲಿಂಡರ್ ದರದಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ. ಬದಲಾಗಿ 19 ಕೆಜಿಯ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಬರೋಬ್ಬರಿ 265 ರೂಪಾಯಿ ಹೆಚ್ಚಾಗಿದೆ.
ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ 265 ರೂ.ಹೆಚ್ಚಾದ ಬಳಿಕ ದೆಹಲಿಯಲ್ಲಿ ಒಂದು ಸಿಲಿಂಡರ್ ಬೆಲೆ 2000 ರೂ.ಗೆ ಏರಿಕೆಯಾಗಿದೆ. ಈ ಹಿಂದೆ 1733 ರೂಪಾಯಿ ಇತ್ತು. ಹಾಗೇ ಮುಂಬೈನಲ್ಲಿ 1,683 ರೂಪಾಯಿ ಇದ್ದ 19 ಕೆಜಿ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ ಈಗ 1950ರೂಪಾಯಿಗೆ ಏರಿದೆ. ಕೋಲ್ಕತ್ತದಲ್ಲಿ 2073ರೂ.ಗೆ ಏರಿಕೆಯಾಗಿದ್ದು, ಚೆನ್ನೈನಲ್ಲಿ 2133 ರೂಪಾಯಿ ಆಗಿದೆ.