ಮಧ್ಯಪ್ರದೇಶ : ಹುಡುಗಿಯನ್ನು ನೋಡಲು ಹೋದ ಹುಡುಗ-ಹುಡುಗಿಯ ತಾಯಿಯನ್ನೇ ಮದುವೆಯಾಗಿರುವ ವಿಚಿತ್ರವಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಹೌದು ಹಾಗೆ ನೋಡಿದರೆ ಯಾರೂ ಕೇಳಿರದ ಹಾಗೂ ನೋಡಿರದ ಒಂದು ವಿಚಿತ್ರವಾದ ಘಟನೆಯಿದು ನಡೆದಿದೆ ಎಂದರೆ ತಪ್ಪಾಗುವುದಿಲ್ಲ. ಅಂದಹಾಗೆ ಮಧ್ಯಪ್ರದೇಶದ ಹಳ್ಳಿಯೊಂದರ ಯುವಕ ಪಕ್ಕದ ಹಳ್ಳಿಗೆ ಹುಡುಗಿಯನ್ನು ನೋಡಲು ಹೋಗಿದ್ದು ಆತನ ಹೆಸರು ಲಬುರಮ್ ಅಂತ. ಇನ್ನು ಹುಡುಗಿಯನ್ನು ನೋಡಿದ ಲಬುರಮ್‌ಗೆ ಹುಡುಗಿ ಇಷ್ಟವಾಗಿದ್ದಾಳೆ ಮಾತು ಕತೆಯು ನಡೆದಿತ್ತು.
ಇತ್ತ ಕಡೆ ಹುಡುಗಿಗೆ ತಂದೆ ಇರಲಿಲ್ಲ, ಹೀಗಾಗಿ ತಾಯಿ ಒಬ್ಬಳೇ ಮಗಳನ್ನು ಸಾಕಿಸಲುಹಿದ್ದಳು. ಇನ್ನು ಪಕ್ಕದ ಹಳ್ಳಿಯವರೆ ಆಗಿದ್ದರಿಂದ ಲಬುರಮ್ ಆಗಾಗ ಹುಡುಗಿಯ ಮನೆಗೆ ಬಂದು ಹೋಗೋದನ್ನು ರೂಡಿ ಮಾಡಿದ್ದ. ಇನ್ನು ಈ ಸಂದರ್ಭದಲ್ಲಿ ಹುಡುಗಿ ಕಾಲೇಜಿಗೆ ಹೋಗುತ್ತಿದ್ದು ಹೀಗಾಗಿ ಮನೆಯಲ್ಲಿ ಅವರ ತಾಯಿ ಮಾತ್ರ ಇರುತ್ತಿದ್ದರು. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಸಲುಗೆ ಬೆಳೆದಿದ್ದು. ನಂತರ ಈ ಸಲುಗೆ ಅನೈತಿಕ ಸಂಬಂಧವಾಗಿ ಮಾರ್ಪಡಾಗಿದೆ.
ಇನ್ನು ಈ ವಿಷಯ ತಿಳಿದ ಬಳಿಕ ಯುವತಿ ತುಂಬಾನೇ ಇಬ್ಬರ ಜೊತೆ ಗಲಾಟೆ ಮಾಡುತ್ತಾಳೆ.ಅಷ್ಟಲ್ಲದೆ ಯುವತಿ ನಿಮ್ಮಿಬ್ಬರ ವಿಷಯ ಊರಿನವರಿಗೆಲ್ಲಾ ಹೇಳ್ತೀನಿ ಅಂತ ಹೇಳಿದಾಗ ಎಲ್ಲಿ ನಮ್ಮ ವಿಷಯ ಎಲ್ಲರಿಗೂ ಗೊತ್ತಾಗಿ ನಮಗೆ ಏನು ಮಾಡುತ್ತಾರೂ ಎಂಬ ಭಯದಿಂದ ಆಕೆಯ ತಾಯಿ ಮತ್ತು ಲಬುರಮ್ ಇಬ್ಬರು ಕೂಡ ಊರನ್ನೇ ಬಿಟ್ಟು ಓಡಿಹೋಗಿದ್ದಾರೆ. ಇಂತಹ ನೀಚ ಕೃತ್ಯದಿಂದ ಯುವತಿ ಕೂಡ ತಲೆತಗ್ಗಿಸುವಂತಾಗಿದೆ. ಅಷ್ಟಲ್ಲದೆ ಊರಿನ ಹಿರಿಯರು ಮತ್ತು ಮುಖಂಡರು ಅದೆಂತ ಕಾಲ ಬಂತಪ್ಪ ಅಂತ ಮಾತಾಡಿಕೊಳ್ಳುತ್ತಿದ್ದಾರೆಂದು ತಿಳಿದು ಬಂದಿದೆ.