';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಸುಳ್ಯ: ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಅಬೂಬಕ್ಕರ್ ಸಿದ್ದೀಕ್ ಎಸ್ ಎ ರವರು ರಾಜ್ಯಮಟ್ಟದ ಕೆ – ಸೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಹ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆದಿದ್ದಾರೆ.
ಇವರು ಪ್ರಾಥಮಿಕ ಶಿಕ್ಷಣವನ್ನು ಶ್ರೀ ಶಾರದಾ ಅನುದಾನಿತ ಪ್ರಾಥಮಿಕ ಗೂನಡ್ಕ ಹಾಗೂ ಸವೇರಪುರ ಕನ್ನಡ ಮಾಧ್ಯಮ ಶಾಲೆ ಕಲ್ಲುಗುಂಡಿ ಯಲ್ಲಿ, ಪ್ರೌಢ ಶಿಕ್ಷಣವನ್ನು ಸವೇರಪುರ ಆಂಗ್ಲ ಮಾಧ್ಯಮ ಶಾಲೆ ಕಲ್ಲುಗುಂಡಿಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಕಲಾ ವಿಭಾಗದಲ್ಲಿ ಎನ್ ಎಂ ಪಿ ಯು ಸಿ ಅರಂತೋಡು, ಬಿ ಎಸ್ ಡಬ್ಲ್ಯೂ ಪದವಿ ಶಿಕ್ಷಣ ವನ್ನು ಎನ್ ಎಂ ಸಿ ಸುಳ್ಯದಲ್ಲಿ ಹಾಗೂ ಎಂ ಎಸ್ ಡಬ್ಲ್ಯೂ ಶಿಕ್ಷಣವನ್ನು ಕೇಂದ್ರೀಯ ವಿಶ್ವವಿದ್ಯಾಲಯ ತಮಿಳುನಾಡಿನಲ್ಲಿ ಪಡೆದಿದ್ದಾರೆ.
ಕಲ್ಲುಗುಂಡಿಯ ಕಮ್ಯೂನಿಟಿ ವೆಲ್ಫೇರ್ ಫೌಂಡೇಶನ್ ಇದರ ಅಜೀವ ಸದಸ್ಯರಾಗಿರುವ ಇವರು ಕಲ್ಲುಗುಂಡಿಯ ಆಲಿ ಹಾಜಿ ಸೆಟ್ಯಡ್ಕ ಹಾಗೂ ಫಾತಿಮಾ ದಂಪತಿಗಳ ಪುತ್ರ.