ಮಂಗಳೂರು: ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದು ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಿನ್ನೆ ರಾತ್ರಿ ವೇಳೆ ಮಂಗಳೂರಿನ ರಥಬೀದಿಯ ವೀರವೆಂಕಟೇಶ ಅಪಾರ್ಟ್ ಮೆಂಟ್ ನಲ್ಲಿ ನಡೆದಿದೆ.ಕೊಲೆಯಾದ ವ್ಯಕ್ತಿ ವಿನಾಯಕ್ ಕಾಮತ್(44) ಎಂದು ತಿಳಿದು ಬಂದಿದೆ.
ನಿನ್ನೆ ರಾತ್ರಿ ದೀಪಾವಳಿ ಆಚರಣೆ ವೇಳೆ ಫ್ಲಾಟ್ ಕೆಳಗೆ ಸಿಮೆಂಟ್ ಹಾಕಿದ ರಸ್ತೆಯಲ್ಲಿ ಕಾರು ಚಲಾಯಿಸಿದ ವಿಚಾರದಲ್ಲಿ ಕೊಲೆಯಾದ ವಿನಾಯಕ್ ಕಾಮತ್ ಹಾಗೂ ಅದೇ ಅಪಾರ್ಟ್‌ಮೆಂಟ್ ನಿವಾಸಿಗಳಾದ ಕೃಷ್ಣಾನಂದ ಕಿಣಿ ಮತ್ತು ಆತನ ಪುತ್ರ ಅವಿನಾಶ್ ಪರಸ್ಪರ ಗಲಾಟೆ ನಡೆದಿದೆ.ಈ ವೇಳೆ ಜಗಳ ತಾರಕಕ್ಕೇರಿ ಪುತ್ರ ಅವಿನಾಶ್ ಕೋಪದಿಂದ ವಿನಾಯಕ್ ಕಾಮತ್ ಎದೆ ಭಾಗಕ್ಕೆ ಚೂರಿ ಇರಿದಿದ್ದಾನೆ. ತಕ್ಷಣವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ವಿನಾಯಕ ಕಾಮತ್ ಸಾವನ್ನಪ್ಪಿದ್ದಾರೆ.
ಈ ದೃಶ್ಯ ಫ್ಲಾಟ್ ನ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.ಸದ್ಯ ಆರೋಪಿಗಳಾದ ಕೃಷ್ಣಾನಂದ ಕಿಣಿ ಮತ್ತು ಆತನ ಪುತ್ರ ಅವಿನಾಶ್ ಕಿಣಿಯನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ