ಪ್ರವಾದಿ ಯವರನ್ನು ತಪ್ಪಾಗಿ ನಿಂದಿಸುವರಿಗೆ ವಿಮರ್ಶಕರಿಗೆ , ಟೀಕಾಕಾರಿಗೆ ಮತ್ತು ಗುಂಪು ಹತ್ಯಾ ವಿಧ್ವಂಸ ಕಾರರಿಗೆ,ಕಂಡು ತಿಳಿದವರಿಗೂ ತಿಳಿಯದವರಿಗೂ, ಪ್ರವಾದಿಯ ವರ ಸಂದೇಶವನ್ನು ತಲುಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.ಪ್ರತಿ ವರ್ಷ ಕನಿಷ್ಟ 50000 ಸಾಮಾನ್ಯ ಜನತೆಗೆ ಪ್ರವಾದಿಯ ವರ ಸಂದೇಶ ಪರಿಚಯವನ್ನು ಈ ಕಾರ್ಯಕ್ರಮದ ಮೂಲಕ ಮಾಡಲು ಸಾಧ್ಯವಾಗುತ್ತಿದೆ.
ಕಳೆದ 16 ವರ್ಷಗಳಿಂದ ಜಿಲ್ಲೆಯ ವಿವಿಧ ವಾರ್ಡ್,ಗ್ರಾಮ, ನಗರಗಳಲ್ಲಿ ಸಂಚರಿಸಿ ವಾಹನಜಾಥಾ,ಸಾರ್ವಜನಿಕ ಸಭೆ,ಸಂವಾದ,ಕರಪತ್ರ ಹಂಚುವಿಕೆ ಇತ್ಯಾದಿ ಮೂಲಕ ಪ್ರವಾದಿಯ ಸಂದೇಶಗಳನ್ನು ಪ್ರತಿಯೊಬ್ಬರಿಗೂ ತಲುಪುವಂತೆ ಬಿತ್ತರಿಸ ಲಾಗುತ್ತಿದೆ. ಸರ್ವ ಸಮುದಾಯಗಳ ಜನರಿಗೆ ಅವರ ಬೀದಿಗಳಲ್ಲಿ ಕನಿಷ್ಠ ಅರ್ಧಗಂಟೆಯ ಅವಧಿಯ ಪ್ರವಾದಿ (ಸ) ಸಂದೇಶಗಳನ್ನು ಆಲಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸುಮಾರು 3000 ಕಿಲೋ ಮೀಟರ್ ಗಳಷ್ಟು ಸಂಚರಿಸಿ ಈ ಸಂದೇಶಗಳನ್ನು ಪ್ರಚಾರ ಪಡಿಸಲಾಗುತ್ತಿ ರುವ ಈ ಅಭಿಯಾನ ನವಂಬರ್ 05 ರಂದು ಉದ್ಘಾಟನೆ ಗೊಂಡು ಮುಂದಿನ 60 ದಿವಸ ಅವಧಿಯ ಕಾರ್ಯಕ್ರಮ ಜರುಗಿ,ಸಾರ್ವಜನಿಕ ಸಮಾರೋಪ ಕಾರ್ಯಕ್ರಮ ನಡೆಯಲಿದೆ.14 ಸಾರ್ವಜನಿಕ ಭಾಷಣಗಳು , ಹಲವು ಕಾರ್ನರ್ ಮೀಟಿಂಗ್ ಗಳು , ಭಾಷಣ ಮತ್ತು ಕ್ವಿಝ್ ಸ್ಪರ್ದೆಗಳು , ಸಾಮಾಜಿಕ ಜಾಲತಾಣಗಳಲ್ಲಿ , ದಿನಕ್ಕೊಂದು ಹದೀಸ್ ಹಾಗು ಹಿರಿಯರ ಒಕ್ಕಣೆ (ಬೈಟ್ಸ್) .,..ಹೀಗೆ ಸುಮಾರು 16 ವರ್ಷಗಳ ಕಾಲ ಲಕ್ಷಗಟ್ಟಲೆ ಜನರನ್ನು ತಲುಪು ಈ ಸಂದೇಶವನ್ನು ಪರಿಚಯಿಸಲಾಗಿದೆ.
ಈ ಅಭಿಯಾನದ ಮುಖ್ಯ ಉದ್ದೇಶವೇ ಪ್ರವಾದಿ ಹ. ಮುಹಮ್ಮದ್ (ಸ) ರವರ ವ್ಯಕ್ತಿತ್ವದ ಪರಿಪೂರ್ಣ ಅನಾವರಣವಾಗಿದೆ.ಜಗತ್ತಿನಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಪ್ರವಾದಿ ಹ. ಮುಹಮ್ಮದ್ (ಸ) ರವರ ಆದರ್ಶ ಮತ್ತು ಸಂದೇಶ ಜಗತ್ತಿನ ಸರ್ವರಿಗೂ ಇನ್ನೂ ತಲುಪಿಲ್ಲ, ವಾಸ್ತವವನ್ನು ಜನರಿಗೆ ತಲುಪಿಸುವುದು ಪ್ರತಿಯೋರ್ವನ ಕರ್ತವ್ಯವಾಗಿದೆ. “ಯುನಿವೆಫ್ ಕರ್ನಾಟಕ” ಧರ್ಮ ನೀಡಿರುವ ಈ ಕರ್ತವ್ಯ ವನ್ನು ಮಾಡಲು ಹೊರಟಿದೆ.ಈ ಹೊಣೆಗಾರಿಕೆ ಪೂರೈಸಿದಾಗ ಮಾತ್ರ ಜನರಲ್ಲಿ ಪ್ರವಾದಿಯ(ಸ) ಬಗ್ಗೆ ಸದ್ವಿಚಾರಗಳು ಉಂಟಾಗುತ್ತದೆ. ಆಗ ದ್ವೇಷಿಸುವ ಹೃದಯಗಳು ಪ್ರವಾದಿಯ ವರ್ಯ(ಸ) ರನ್ನು ಪ್ರೀತಿಸಲು ಆರಂಭಿಸುತ್ತದೆ ಎಂದು ಯುನಿವೆಫ್ ಕರ್ನಾಟಕ ಮಂಗಳೂರು ಇದರ ಮುಖ್ಯಸ್ಥರಾದ ರಫೀಯುದ್ದೀನ್ ಕುದ್ರೋಳಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.