dtvkannada

ಬೆಂಗಳೂರು: ಕೋವಿಡ್ ಅಲೆ ಹೆಚ್ಚಾದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿದ್ದ ನೈಟ್ ಕರ್ಫ್ಯೂ ವನ್ನು ಹಿಂಪಡೆಯಲಾಗಿದೆ ಎಂದು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಪಿ.ರವಿಕುಮಾರ್ ತಿಳಿಸಿದ್ದಾರೆ.

ಒಂದೊಂದೇ ಹಂತದಲ್ಲಿ ಕರ್ಫ್ಯೂ ಸಡಿಲಿಕೆ ಮಾಡಿದ್ದ ರಾಜ್ಯ ಸರ್ಕಾರ ರಾತ್ರಿ 10 ರಿಂದ ಬೆಳಿಗ್ಗೆ 5 ರ ವರೆಗೆ ನೈಟ್ ಕರ್ಫ್ಯೂ ನ್ನು ಮುಂದುವರೆಸಿತ್ತು.
ಅದನ್ನು ಇವತ್ತು ಹಿಂಪಡೆಯಲಾಗಿದೆ ಎಂದು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.
ನೈಟ್ ಕರ್ಫ್ಯೂ ಇಲ್ಲಿಯವರೆಗೆ ಇದ್ದರೂ ರಾಜ್ಯದ ಜನತೆ ಅದನ್ನು ಪಾಲಿಸುತ್ತಿರಲಿಲ್ಲ.
ಜನರ ನಿರ್ಲಕ್ಷ್ಯತೆಗೆ ಸರ್ಕಾರ ಮಣಿದಂತಿದೆ ಈ ಆದೇಶ ಎಂದು ಸಾರ್ವಜನಿಕರ ಹೇಳಿಕೆಯಲ್ಲಿ ಕೇಳಿ ಬರುತ್ತಿದೆ.

ಇದಕ್ಕೂ ಮೊದಲು ಅಕ್ಟೋಬರ್ 25 ರಂದು ಶಾಲೆ ಪುನಾರಂಭಿಸುವಂತೆ ಆದೇಶ ನೀಡಲಾಗಿತ್ತು. ಈಗಾಗಲೇ ಶಾಲೆ ಕಾಲೇಜುಗಳು ಆಫ್ಲೈನ್ ವಿಧಾನದಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿವೆ. ಸಿನಿಮಾ ಹಾಲ್, ಈಜುಕೊಳಗಳಿಗೂ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿದ್ದ ನೈಟ್ ಕರ್ಫ್ಯೂ ಆದೇಶವನ್ನು ಇಂದು ಹಿಂಪಡೆಯಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!