ಬೆಂಗಳೂರು: ರಾಜ್ಯದಲ್ಲಿ ಕೆಲದಿನಗಳಿಂದ ನೇತ್ರದಾನ, ರಕ್ತದಾನ, ಹೆಚ್ಚಾಗುತ್ತಿದ್ದಂತೆ ಇಂದು ಶಾಸಕ ಜಮೀರ್ ಅಹಮ್ಮದ್ ಖಾನ್ ನೇತ್ರದಾನಕ್ಕೆ ಮುಂದಾಗಿದ್ದಾರೆ.ಮಿಂಟೋ ಆಸ್ಪತ್ರೆಗೆ ತೆರಳಿ ಜಮೀರ್ ಅಹಮ್ಮದ್ ಖಾನ್ ನೇತ್ರದಾನಕ್ಕೆ ಸಹಿ ಹಾಕಿದ್ದಾರೆ.
ಸ್ಯಾಂಡಲ್‍ವುಡ್ ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನರಾದ ಬಳಿಕ ನೇತ್ರದಾನ ಮಾಡಿದರು. ಬಳಿಕ ಅವರ ಅಭಿಮಾನಿಗಳು ಸಹಿತ ಸಾವಿರಾರು ಮಂದಿ ನೇತ್ರದಾನ ಮಾಡಲು ಮುಂದಾಗಿದ್ದಾರೆ. ನಿನ್ನೆ ಪುನೀತ್ ರಾಜ್ ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ಅಭಿಮಾನಿಗಳಿಗಾಗಿ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಜೊತೆಗೆ ನೇತ್ರದಾನ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಈ ವೇಳೆ ಬರೋಬ್ಬರಿ 3,100ಕ್ಕೂ ಹೆಚ್ಚು ಅಭಿಮಾನಿಗಳು ನೇತ್ರದಾನಕ್ಕೆ ಅರ್ಜಿ ಹಾಕುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಈ ಬಗ್ಗೆ ಲಯನ್ ಸಂಸ್ಥೆ ಎನ್ವಿರ್ನಾಮೆಂಟ್ ಅಧ್ಯಕ್ಷರಾದ ಪ್ರಕೃತಿ ಪ್ರಸನ್ನ ಮಾತನಾಡಿ, ಒಂದೇ ದಿನದಲ್ಲಿ 3,100ಕ್ಕೂ ಹೆಚ್ಚು ನೇತ್ರದಾನ ಅರ್ಜಿ ಸ್ವೀಕಾರ ಮಾಡಿದ್ದೇವೆ. ಈ ದಿನ ನಿಜಕ್ಕೂ ಐತಿಹಾಸಿಕ ದಿನ. ಜೊತೆಗೆ 355 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ಜನ ರಕ್ತದಾನ ಮಾಡಿರುವುದಲ್ಲದೇ, ನೇತ್ರದಾನಕ್ಕೆ ಅರ್ಜಿ ಸಲ್ಲಿಸಿರುವುದನ್ನು ನೋಡುತ್ತಿದ್ದೇವೆ. ನಿನ್ನೆ ಕೂಡ ವಿಐಪಿಗಳು 350 ಮಂದಿ ನೇತ್ರದಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಾವು ಇಲ್ಲಿವರೆಗೆ ಎಷ್ಟೋ ಶಿಬಿರಗಳನ್ನು ಮಾಡಿದ್ದೇವೆ. ಇಷ್ಟು ಪ್ರಮಾಣದಲ್ಲಿ ನೋಂದಣಿ ಆಗಿಲ್ಲ ಎಂದು ತಿಳಿಸಿದ್ದಾರೆ.