dtvkannada

ಸುಳ್ಯ: ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಸಪ್ತಸ್ವರ ಸಂಗೀತ ತರಬೇತಿ ಕೇಂದ್ರ ಸುಳ್ಯ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇತ್ತೀಚಿಗೆ ವಿಧಿವಶರಾದ ದಿ|| ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಗಾನ ನಮನ ಕಾರ್ಯಕ್ರಮವು ನೆರವೇರಿತು .

ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷರಾದ ಎಚ್ . ಭೀಮರಾವ್ ವಾಷ್ಠರ್ ರವರು ತಮ್ಮ ನುಡಿನಮನ ಭಾಷಣದಲ್ಲಿ ಅಗಲಿದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ಬಾಲ್ಯ ಜೀವನ, ಚಲನ ಚಿತ್ರ ಬದುಕು, ಅವರ ಗಾಯನ, ಪ್ರಶಸ್ತಿ, ವ್ಯಕ್ತಿತ್ವದ ಬಗ್ಗೆ ಗುಣಗಾನ ಮಾಡಿದರು. ಸಪ್ತಸ್ವರ ಸಂಗೀತ ತರಬೇತಿ ಕೇಂದ್ರದ ವ್ಯವಸ್ಥಾಪಕರಾದ ಅರುಣ್ ರಾವ್ ಜಾಧವ್ ರವರು ಪುಷ್ಪನಮನ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಗಾಯಕರಾದ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ಮತ್ತು ರವಿಚಂದ್ರ ಕೊಡಿಯಾಲ್ ಬೈಲು ರವರು ಉಪಸ್ಥಿತರಿದ್ದರು .

ಮೌನ ಪ್ರಾರ್ಥನೆ ಮಾಡಿ ನಂತರ ಪುಷ್ಪಾರ್ಚನೆ ಮಾಡಿದ ಗಾಯಕರಾದ ಸಾಯಿ ಪ್ರಶಾಂತ್, ಪೃಥ್ವಿರಾಜ್ ಪೆರ್ಲಂಪಾಡಿ, ಅಶ್ವಿಜ್ ಅತ್ರೇಯ, ಮನ್ವಿತಾ ಬೆಳ್ಳಾರೆ, ಹರ್ಷಿತಾ ಕೆ ಎಸ್, ದಯಾನಂದ್ ದೇಲಂಪಾಡಿ, ಹರಿಪ್ರಸಾದ್ ಪಿ, ಸುನೀಶ್ ಕಾಸರಗೋಡು ಮತ್ತು ಇನ್ನಿತರರು ಪುನೀತ್ ರಾಜ್ ಕುಮಾರ್ ಅವರ ಚಿತ್ರಗಳಿಂದ ಆಯ್ದ ಗೀತೆಗಳನ್ನು ಹಾಡಿ ಗಾನನಮನ ಸಲ್ಲಿಸಿದರು .

By dtv

Leave a Reply

Your email address will not be published. Required fields are marked *

error: Content is protected !!