ಮಂಗಳೂರು: ನಗರದ ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರಿಡುವ ಬದಲು ಜಿಲ್ಲೆಗೆ ಕೊಡುಗೆ ನೀಡಿದ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ, ಶ್ರೀನಿವಾಸ ಮಲ್ಯ, ಕುದ್ಮಲ್ ರಂಗರಾವ್ ಹೆಸರಿಡಿ ಎಂದು ಶಾಸಕ ಯು.ಟಿ ಖಾದರ್ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅದು ನನ್ನ ವಿಧಾನ ಸಭಾ ಕ್ಷೇತ್ರ ಅಲ್ಲ. ಆದರೂ ಜಿಲ್ಲೆಗೆ ಕೊಡುಗೆ ನೀಡಿದವರ ಹೆಸರಿಡಿ. ಇದರಿಂದ ಮುಂದಿನ ಪೀಳಿಗೆ ಇತಿಹಾಸ ತಿಳಿಯುತ್ತದೆ. ರಾಷ್ಟ್ರೀಯ, ರಾಜ್ಯ ನಾಯಕರ ಹೆಸರಿಡುವ ಬದಲು ಇಲ್ಲಿನವರ ಹೆಸರಿಡಿ ಎಂದು ಅಭಿಪ್ರಾಯಪಟ್ಟರು.