ದೆಹಲಿ: ಕಿತ್ತಳೆ ಹಣ್ಣು ಮಾರಿ ಮಂಗಳೂರಿನ ಹರೇಕಳದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಹಲವಾರು ವಿದ್ಯಾರ್ಥಿಗಳ ಪಾಲಿಗೆ ಅಕ್ಷರ ಸಂತರಾಗಿರುವ ಹರೇಕಳ ಹಾಜಬ್ಬರಿಗೆ ದೇಶದ 4ನೇ ಅತೀ ದೊಡ್ಡ ಪುರಸ್ಕಾರ ಪದ್ಮ ಶ್ರೀ ಪ್ರಶಸ್ತಿಯನ್ನು ಇಂದು ದೆಹಲಿಯಲ್ಲಿ ರಾಷ್ಟಪತಿ ರಮಾನಾಥ್ ಕೋವಿಂದ್ ರವರು ಪ್ರಧಾನಗೈದರು.
ಹಾಜಬ್ಬರ ಕಿತ್ತಳೆ ಹಣ್ಣಿನ ಬೆವರಿಗೆ ಶಿಕ್ಷಣ ಸಂಸ್ಥೆಯೊಂದು ತಲೆ ಎತ್ತಿದ್ದು ಅದು ಅವರ ಪರಿಶ್ರಮದ ಫಲವಾಗಿತ್ತು.
ಕೇಂದ್ರ ಸರ್ಕಾರ ಅಂತಹ ಅಕ್ಷರ ಸಂತರನ್ನು ಗೌರವಿಸಿದ್ದು ಹಾಜಬ್ಬರ ನಾಡಾದ ದ.ಕ ಜಿಲ್ಲೆಯಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದೆ.
ಅಪಾರ ಅಭಿಮಾನಿ ಬಳಗ ಹಿತೈಷಿಗಳು ಹಜಬ್ಬಾರಿಗೆ ಅಭಿನಂದನೆಗಳ ಸಲ್ಲಿಸಿದ್ದಾರೆ.
ದೆಹಲಿಯ ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ನಡೆದ ಸಮಾರಂಭದಲ್ಲಿ ಮರಣೋತ್ತರವಾಗಿ ಕೇಂದ್ರದ ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಾರ್ಜ್ ಫೆರ್ನಾಂಡಿಸ್ ಅವರ ಪರವಾಗಿ ಅವರ ಪತ್ನಿ ಗೌರವ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ಇಂದು ಬೆಳಗ್ಗೆ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.