ಮಾಣಿ: ಬದ್ರಿಯಾ ಜುಮಾ ಮಸೀದಿ ಸೂರಿಕುಮೇರು ಇದರ ಮಿಫ್ತಾಉಲ್ ಉಲೂಮ್ ಮದ್ರಸಾ ವಿದ್ಯಾರ್ಥಿಗಳ ಮೀಲಾದ್ ಫೆಸ್ಟ್ ಕಾರ್ಯಕ್ರಮ ವಿಜೃಂಭಣೆಯಿಂದ ಶನಿವಾರ ಮಗ್ರಿಬ್ ನಮಾಝ್ ಬಳಿಕ ಮಸೀದಿ ವಠಾರದಲ್ಲಿ ನಡೆಯಿತು.
ಖತೀಬ್ ಇಸ್ಮಾಯಿಲ್ ಆಸಿಫ್ ಹನೀಫಿ ಗಾಳಿಮುಖ,
ಸದರ್ ಉಸ್ತಾದ್, ಅಬ್ದುಲ್ ಸಲಾಂ ಹನೀಫಿ ಕಬಕ,
ಮುಅಲ್ಲಿಂ ಅಬ್ದುಲ್ ಗಫೂರ್ ಮುಸ್ಲಿಯಾರ್ ಕಬಕ, ಕಾರ್ಯಕ್ರಮದ ನೇತೃತ್ವ ವಹಿಸಿ ದುಆ ಮಾಡಿ ನಿರೂಪಿಸಿಕೊಟ್ಟರು. ಮದ್ರಸಾ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಸ್ಮರಣಿಕೆ ವಿತರಣೆ ಮುಂತಾದ ಹಲವಾರು ಕಾರ್ಯಕ್ರಮಗಳು ನಡೆಯಿತು.
ಮಸೀದಿಯ ಅಧ್ಯಕ್ಷರು,ಕಾರ್ಯದರ್ಶಿ,ಕೋಶಾಧಿಕಾರಿ, ಮತ್ತು ಇತರ ಪದಾಧಿಕಾರಿಗಳು,ಸದಸ್ಯರುಗಳು,ಮತ್ತು ಜಮಾಅತಿನ ಎಲ್ಲರೂ ಸಹಕರಿಸಿದರು.