ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಕೊಂಬೆಟ್ಥು ಸರಕಾರಿ ಜುನಿಯರ್ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ “ಅರಿವು”ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೇಳಗಿಸಿ ಉಧ್ಘಾಟಿಸಿ ಮಾತನಾಡಿದ ಕೊಂಬೆಟ್ಥು ವಾರ್ಡ್ ನಗರಸಭಾ ಸದಸ್ಯರೂ ಕೊಂಬೆಟ್ಥು ಜೂನಿಯರ್ ಕಾಲೇಜಿನ ಮೇಲುಸ್ತುವಾರಿಗಳೂ ಆದ ಪಿ.ಜಿ ಜಗನ್ನಿವಾಸ್ ರಾವ್, ವಿದ್ಯಾರ್ಥಿಗಳಲ್ಲಿ ಅಗತ್ಯ ವಿಚಾರಗಳ ಅರಿವಿನ ಕಾರ್ಯಕ್ರಮ ವನ್ನು ಯಶಸ್ಸನ್ನು ದೃಶೀಕರಿಸಿ ಹಾಗೂ ವಿದ್ಯಾರ್ಥಿಗಳು ಅಗತ್ಯ ಗುರಿಯನ್ನು ಹೊಂದುವ ಸಲುವಾಗಿ ವೃತ್ತಿ ದೃಷ್ಟಿಕೋನ, ನಡವಳಿಕೆ ಹಾಗೂ ಪ್ರಯೋಜನ, ಅಧ್ಯಯನ ತಂತ್ರಗಳು ಹಾಗೂ ಪರೀಕ್ಷಾ ತಯಾರಿ, ಕಾನೂನು ಸಾಕ್ಷರತೆ, ಸ್ವಯಂ ಅಭಿವೃದ್ಧಿ ಹಾಗೂ ನಿಮ್ಮನ್ನು ನೀವು ತಿಳಿದುಕೊಳ್ಳುವುದು, ಹದಿಹರೆಯದ ಸಮಸ್ಯೆಗಳು, ಸ್ವಸ್ಥ ಮನಸ್ಸು-ಸ್ವಸ್ಥ ದೇಹ, ಸ್ಪರ್ಧಾತ್ಮಕ ಪರೀಕ್ಷೆಗಳು, ಸಾಮಾಜಿಕ ಜವಾಬ್ದಾರಿಗಳು ಹೀಗೆ ಹತ್ತು ವಿಷಯಗಳೊಂದಿಗೆ ರೋಟರಿ ಸಂಸ್ಥೆಯು ಸೇವೆಯ ಜೊತೆಗೆ ವಿಷಯಾಧಾರಿತ ಉತ್ತಮ ಭಾವನೆಗಳನ್ನ ಇಟ್ಟುಕೊಂಡು ಸೇವೆ ಮಾಡುತ್ತಿರುವ ಸಂಸ್ಥೆಯಾಗಿದೆ. ಇದೀಗ ಮನುಷ್ಯನ ಮನೆ ಹಾಗೂ ಮನಗಳಲ್ಲಿನ ಕಸವನ್ನು ನಿರ್ಮೂಲನೆ ಮಾಡುವ ಉದ್ದೇಶವನ್ನಿಟ್ಥುಕೊಂಡಿರುವೂದರೊಂದಿಗೆ ಈಗಿನ ವಿದ್ಯಾರ್ಥಿಗಳೇ ನಿಜಕ್ಕೂ ಧನ್ಯರು ಎಂದರು.
ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ಪ್ರಾಂಶುಪಾಲ ಸುರೇಶ್ ಎನ್.ಕೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶಿಕ್ಷಣದಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಗೊಳ್ಳದಿರುವುದು ಬೇಸರದ ಸಂಗತಿ. ವಿದ್ಯಾರ್ಥಿಗಳು ಸಾರ್ವಜನಿಕರೊಂದಿಗೆ ಧನಾತ್ಮಕ ರೀತಿಯಲ್ಲಿ ಪರಸ್ಪರ ಸಂವಹನ ಕಲೆಯನ್ನು ಬೆಳೆಸದಿರುವುದು ಮತ್ತೂ ಬೇಸರವಾಗಿದೆ. ವಿದ್ಯಾರ್ಥಿಗಳಲ್ಲಿ ಪರಸ್ಪರ ಒಳ್ಳೆಯ ಭಾವನೆ, ನಂಬಿಕೆ ಮತ್ತು ವಿಶ್ವಾಸ ಹೊಂದುವುದು ಅತ್ಯಂತ ಅಗತ್ಯವಾಗಿದೆ. ರೋಟರಿ ಸಂಸ್ಥೆಯು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವ ಮೂಲಕ ಮಕ್ಕಳನ್ನು ಸತ್ಪ್ರಜೆಯತ್ತ ಬೆಳೆಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ರೋ ನವೀನ್‌ಚಂದ್ರ ನಾಕ್‌ರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ರೋಟರಿ ಜಿಲ್ಲೆ ಬೇಸಿಕ್ ಎಜ್ಯುಕೇಶನ್ ಲಿಟರೆಸಿ ಇದರ ಉಪ ಸಭಾಪತಿ ರೋ ಆಸ್ಕರ್ ಆನಂದ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿಯರಾದ ವೀಕ್ಷಾ, ರಕ್ಷಾ, ಅಪರ್ಣ ರವರು ಪ್ರಾರ್ಥಿಸಿದರು. ರೋಟರಿ ಸೆಂಟ್ರಲ್‌ನ ಟೀಚ್ ಚೇರ್‌ಮ್ಯಾನ್ ರೋ ಭಾರತಿ ಎಸ್.ರೈಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ಉಪನ್ಯಾಸಕ ರೋ ಧರಣಪ್ಪ ಗೌಡ ವಂದಿಸಿದರು, ರೋಟರಿ ಸೆಂಟ್ರಲ್ ಕಾರ್ಯದರ್ಶಿ ರೋ ಡಾ.ರಾಜೇಶ್ ಬೆಜ್ಜಂಗಳ ಕಾರ್ಯಕ್ರಮ ನಿರೂಪಿಸಿದರು.
ರೋಟರಿ ಸೆಂಟ್ರಲ್‌ನ ಸ್ಥಾಪಕಾಧ್ಯಕ್ಷ ರೋ ಸಂತೋಷ್ ಶೆಟ್ಟಿ, ನಿಯೋಜಿತ ಅಧ್ಯಕ್ಷ ರೋ ರಫೀಕ ದರ್ಬೆ, ನಿರ್ಗಮಿತ ಅಧ್ಯಕ್ಷ ರೋ ವೆಂಕಟ್ರಾಜ್ ಪಿ.ಜಿ, ನಿರ್ಗಮಿತ ಕೋಶಾಧಿಕಾರಿ ರೋ ಅಶ್ರಫ್, ನ್ಯಾಯವಾದಿ ರೋ ಕವನ್ ನಾಕ್, ರೋ ಸನತ್ ಕುಮಾರ್ ರೈ ,ಪತ್ರಕರ್ತ ರೋ ಮೌನೇಶ್ ವಿಶ್ವಕರ್ಮ, ರೋ ಶಾಂತಕುಮಾರ್, ರೋ ರಾಕೇಶ್ ಪಿ.ಶೆಟ್ಥಿ ಸಹಿತ ಹಲವರು ಉಪಸ್ಥಿತರಿದ್ದು ಸಹಕರಿಸಿದರು.
ರೋಟರಿ ಇಂಡಿಯಾ ಲಿಟರೆಸಿ ಮಿಶನ್‌ನ ಒಂದು ಸಮಗ್ರ ಯೋಜನೆಯಾದ ಟೀಚ್ ಶೀರ್ಷಿಕೆಯಡಿಯಲ್ಲಿ ಸರಕಾರಿ ಹಾಗೂ ಗ್ರಾಮೀಣ ಶಾಲಾ-ಕಾಲೇಜಿನ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರನ್ನು ಸರ್ವತೋಮುಖವಾಗಿ ಬಲಗೊಳಿಸುವ ಒಂದು ದೀರ್ಘಕಾಲಿಕ ಯೋಜನೆ ಹಾಗೂ ವಿವೇಕದ ಕಡೆಗೆ, ಲೋಕಜ್ಞಾನದ ಕಡೆಗೆ ಕರೆದೊಯ್ಯವ ಯೋಜನೆಯೇ ಈ ಅರಿವು ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ರೋಟರಿ ಸೆಂಟ್ರಲ್ ಸದಸ್ಯರಾದ ಪುತ್ತೂರಿನ ತಹಶೀಲ್ದಾರ್ ರೋ ರಮೇಶ್ ಬಾಬು ಸೇರಿದಂತೆ ರೋ ಚಂದ್ರಹಾಸ ರೈ, ರೋ ಡಾ|ರಾಜೇಶ್ ಬೆಜ್ಜಂಗಳ, ಡಾ|ರೋ ರಾಮಚಂದ್ರ ಕೆ, ರೋ ಶಿವರಾಮ ಎಂ.ಎಸ್, ರೋ ನ್ಯಾಯವಾದಿ ಚಿದಾನಂದ ರೈ, ರೋ ರಾಕೇಶ್ ಪಿ.ಶೆಟ್ಟಿ, ರೋ ಭಾರತಿ ಎಸ್.ರೈ ಹೀಗೆ ಎಂಟು ಮಂದಿ ಸಂಪನ್ಮೂಲ ವ್ಯಕ್ತಿಗಳು ಯಾವುದೇ ಫಲಾಪೇಕ್ಷೆಯಿಲ್ಲದೆ ನಿರ್ವಹಿಸುತ್ತಿದ್ದಾರೆ.
ಒಂದು ವರ್ಷದಲ್ಲಿ ಸುಮಾರು 300 ಕಾರ್ಯಕ್ರಮಗಳು ನಡೆಸುವುದು ಕ್ಲಬ್ಬಿನ ಯೋಜನೆಯಾಗಿದೆ ಎಂದು ಟೀಚ್ ಚೈರ್ಮೇನ್ ಭಾರತಿ ಎಸ್.ರೈ ಹೇಳಿದರುಸುಮಾರು 10 ವಿಷಯಗಳನ್ನಿಟ್ಥುಕೊಂಡುಯಶಸ್ಸನ್ನು ದೃಶೀಕರಿಸಿ ಹಾಗೂ ಗುರಿಯನ್ನು ಹೊಂದುವ, ವೃತ್ತಿ ದೃಷ್ಟಿಕೋನ, ನಡವಳಿಕೆ ಹಾಗೂ ಪ್ರಯೋಜನ, ಅಧ್ಯಯನ ತಂತ್ರಗಳು ಹಾಗೂ ಪರೀಕ್ಷಾ ತಯಾರಿ, ಕಾನೂನು ಸಾಕ್ಷರತೆ, ಸ್ವಯಂ ಅಭಿವೃದ್ಧಿ ಹಾಗೂ ನಿಮ್ಮನ್ನು ನೀವು ತಿಳಿದುಕೊಳ್ಳುವುದು, ಹದಿಹರೆಯದ ಸಮಸ್ಯೆಗಳು, ಸ್ವಸ್ಥ ಮನಸ್ಸು-ಸ್ವಸ್ಥ ದೇಹ, ಸ್ಪರ್ಧಾತ್ಮಕ ಪರೀಕ್ಷೆಗಳು, ಸಾಮಾಜಿಕ ಜವಾಬ್ದಾರಿಗಳು ಹೀಗೆ ಹತ್ತು ವಿಷಯಗಳನ್ನು ಈ ಅರಿವು ಹೊಂದಿದೆ. ಇದಲ್ಲದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿಷಯಗಳು ಸೇರ್ಪಡೆಗೊಳ್ಳಬಹುದು ಎಂದು ಸಂಘಟಕರು ತಿಳಿಸಿದ್ದಾರೆ.