ಉಡುಪಿ: ಸ್ಕೂಟರ್‌ಗೆ ಹಿಂಬದಿಯಿಂದ ಲಾರಿ ಢಿಕ್ಕಿ ಹೊಡೆದು 8 ವರ್ಷದ ಬಾಲಕಿ ಅದೇ ಲಾರಿಯಡಿ ಬಿದ್ದು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ ಘಟನೆ ನಿನ್ನೆ ಉಡುಪಿ ಅಂಬಾಗಿಲು ಬಳಿಯ ನಾರಾಯಣ ನಗರ ಎಂಬಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಪ್ರಣಮ್ಯ ಜಿ ನಾಯಕ್(8) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆ:
ನಿನ್ನ ಸಂಜೆ 4 ಗಂಟೆ ಸುಮಾರಿಗೆ ಸ್ಕೂಟರ್ ನಲ್ಲಿ ದಿವ್ಯಾ ಜಿ ನಾಯಕ್ ಮಗಳು ಪ್ರಣಮ್ಯ ಜಿ ನಾಯಕ್ ಅವರನ್ನು ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಬರುತ್ತಿದ್ದರು.
ಅಂಬಾಗಿಲು ಬಳಿಯ ನಾರಾಯಣ ನಗರ ರಸ್ತೆಯ ಜಂಕ್ಷನ್ ನನ್ನು ತಲುಪುವಾಗ ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ಟ್ರಾನ್ಸಿಟ್ ಮಿಕ್ಸರ್ ಲಾರಿ ಸ್ಕೂಟರಿನ ಬಲಬದಿಗೆ ಏಕಾಏಕಿ ಡಿಕ್ಕಿ ಹೊಡೆದಿದೆ.
ಪರಿಣಾಮ ಸ್ಕೂಟರಿನಲ್ಲಿದ್ದ ದಿವ್ಯಾ ಹಾಗೂ ಸಹಸವಾರೆ ಮಗಳು ಪ್ರಣಮ್ಯ ರಸ್ತೆಗೆ ಬಿದ್ದಿದ್ದಾರೆ.
ಈ ವೇಳೆ ಪ್ರಣಮ್ಯ ದೇಹದ ಮೇಲೆ ಅದೇ ಲಾರಿಯ ಚಕ್ರವು ಹರಿದು ಹೋಗಿ ಮಗುವಿನ ತಲೆ, ಹೊಟ್ಟೆ ಮತ್ತು ಕಾಲಿನ ಮೇಲಿನ ಚರ್ಮ ಹರಿದು ಹೋಗಿ ಛಿದ್ರವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.