dtvkannada

'; } else { echo "Sorry! You are Blocked from seeing the Ads"; } ?>

ನೆಟ್ಟಣಿಗೆಮುಡ್ನೂರು, ನ‌.12:- ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ನೆಟ್ಟಣಿಗೆ ಮುಡ್ನೂರು ಗ್ರಾಮ ಸಮಿತಿಯ ಅಧೀನದಲ್ಲಿ ಪಕ್ಷದ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮವೂ ಈಶ್ವರಮಂಗಲದಲ್ಲಿ ನಡೆಯಿತು.

ಪಕ್ಷದ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ರವರು ಕಛೇರಿಯನ್ನು ಉದ್ಘಾಟಿಸಿದರು.ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇಬ್ರಾಹಿಂ ಸಾಗರ್ ರವರು SDPI ಪಕ್ಷವು ರಾಷ್ಟ್ರಮಟ್ಟದಲ್ಲಿ ಬಹಳ ವೇಗವಾಗಿ ಬೆಳೆಯುತ್ತಿದ್ದು, ನಮ್ಮ ಜವಾಬ್ದಾರಿಯು ಕೂಡ ಹೆಚ್ಚಾಗಿದೆ ಇದೀಗ ಈಶ್ವರಮಂಗಲದಲ್ಲಿ ಆರಂಭಗೊಂಡ ಪಕ್ಷದ ಕಚೇರಿಯು ಗ್ರಾಮ ಮಟ್ಟದ ಗ್ರಾಮದ ಪ್ರತೀ ಜನರ ಸೇವೆಗಾಗಿ ಯಾವಾಗಲೂ ತೆರೆದಿರಲಿ ಎಂದು ಹೇಳಿ ಶುಭ ಹಾರೈಸಿದರು.

'; } else { echo "Sorry! You are Blocked from seeing the Ads"; } ?>

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಸದಸ್ಯರಾದಂತಹ ಕೆ ಎ ಸಿದ್ದೀಕ್ ಮಾತನಾಡಿ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಸಾಗರ್, ಕುಂಬ್ರ ಬ್ಲಾಕ್ ಸಮಿತಿ ಅಧ್ಯಕ್ಷರಾದ ಕೆಎಂ ಶರೀಫ್ ಕಟ್ಟತ್ತಾರು ಹಾಗೂ ಕಟ್ಟಡದ ಮಾಲೀಕರಾದ ಅಬೂಬಕ್ಕರ್ ಮುಸ್ಲಿಯಾರ್ ರವರಿಗೆ ಸನ್ಮಾನ ಮಾಡಿ ಸ್ಮರಣಿಕೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪುತ್ತೂರು ಕ್ಷೇತ್ರ ಸಮಿತಿಯ ಸದಸ್ಯರಾದ ಪಿಬಿಕೆ ಮಹಮ್ಮದ್, ಕುಂಬ್ರ ಬ್ಲಾಕ್ ಸಮಿತಿ ಅಧ್ಯಕ್ಷರಾದ ಕೆಎಂ ಶರೀಫ್ ಕಟ್ಟತ್ತಾರ್ ನೆಟ್ಟಣಿಗೆ ಮೂಡ್ನೂರು ಗ್ರಾಮ ಸಮಿತಿ ಅಧ್ಯಕ್ಷರಾದ ಮಹಮ್ಮದ್ ಸಾಧಿಕ್ ಪಿ, ನೆಟ್ಟಣಿಗೆಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಸಂಶುದ್ದೀನ್, ರಿಯಾಜ್ ನೆಯ್ಯಡ್ಕ, ನೆಟ್ಟಣಿಗೆಮುಡ್ನೂರು ಗ್ರಾಮ ಸಮಿತಿ ಹಾಗೂ ಬೂತ್ ಸಮಿತಿ ಮುಖಂಡರು ಸೇರಿದಂತೆ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದ್ದರು.ಜಮಾಲ್ ಬಿ ಸಿ ಸ್ವಾಗತಿಸಿ, ರಶೀದ್ ಇಂಡೋ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!