ಮಂಗಳೂರು: ನಗರದ ಕೋಡಿಕಲ್‌ನಲ್ಲಿರುವ ನಾಗನಕಟ್ಟೆಯ ನಾಗಬಿಂಬ ಎಸೆದು ದುಷ್ಕೃತ್ಯ ಎಸೆದ ಆರೋಪಿಗಳನ್ನು ಬಂಧಿಸಲು ಪೊಲೀಸರ ಮೇಲೆ ಒತ್ತಡ ಹೇರುವ ಸಲುವಾಗಿ ಹಾಗೂ ದೈವ, ದೇವಸ್ಥಾನಗಳನ್ನು ಅಪವಿತ್ರಗೊಳಿಸುವುದನ್ನು ಖಂಡಿಸಿ ಇಂದು ಹಿಂದು ಸಂಘಟನೆಗಳು ಕೋಡಿಕಲ್‌ಬಂದ್‌ಗೆ ಕರೆ ನೀಡಿವೆ.
ಕೋಡಿಕಲ್‌ನಲ್ಲಿ ವಿಶ್ವಹಿಂದೂಪರಿಷತ್ ಹಾಗೂ ಸ್ಥಳೀಯ ಸಾರ್ವಜನಿಕರು ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
ಮೆಡಿಕಲ್‌ಶಾಪ್‌ಗಳು, ಚಿಕ್ಕನ್, ಮಟನ್, ಅಂಗಡಿ, ತರಕಾರಿ, ಹಣ್ಣುಹಂಪಲು ಅಂಗಡಿ, ದಿನಸಿ ಅಂಗಡಿಗಳ ಸಹಿತ ಬಹುತೇಕರು ಸ್ವಯಂಪ್ರೇರಿತರಾಗಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇನ್ನು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗು ಪೊಲೀಸ್‌ಕ್ರಮ ಕೈ ಗೊಳ್ಳಲಾಗಿದೆ.
ಶುಕ್ರವಾರ ರಾತ್ರಿ ಕೋಡಿಕಲ್‌ನಲ್ಲಿರುವ ನಾಗ ಕಲ್ಲಿನ ಬಿಂಬವನ್ನು ಕಿಡಿಗೇಡಿಗಳು ಕಿತ್ತು ಎಸೆದಿದ್ದು, ಮರುದಿನ ಇಲ್ಲಿಗೆ ಬಂದ ಭಕ್ತರಿಗೆ ವಿಚಾರ ತಿಳಿದು ಹಿಂದು ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು.
ಅಲ್ಲದೆ ಘಟನಾ ಸ್ಥಳಕ್ಕೆ ಶಾಸಕ ಭರತ್‌ಶೆಟ್ಟಿ, ನಗರ ಪೊಲೀಸ್ ಕಮಿಷನರ್‌ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್‌ಭೇಟಿ ನೀಡಿ ಮನವಿ ಮಾಡಿದ್ದರೂ ಪ್ರತಿಭಟನೆ ಕೈಬಿಟ್ಟಿರಲಿಲ್ಲ.
ಆರೋಪಿಗಳನ್ನು ಬಂಧಿಸಬೇಕೆಂದು ಹಿಂದೂ ಸಂಗಟನೆಗಳು ಒತ್ತಾಯಿಸಿ ಪ್ರತಿಭಟನೆಯನ್ನು ನಡೆಸುತ್ತಿವೆ.