ಉಳ್ಳಾಲ: ಇಲ್ಲಿನ ಕುರ್ನಾಡು ಸುಬ್ಬಗೋಳಿ ಮಸೀದಿ ಬಳಿ ಒಂದು ಸಮುದಾಯವನ್ನು ನಿಂದಿಸಿದ ಮೂವರು ಯುವಕರನ್ನು ಸ್ಥಳೀಯರು ಹಿಡಿದು ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದೆ.
ಹರ್ಷಿತ್, ವಿಘ್ಣೇಶ್ ಮತ್ತು ಶರಣ್ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ನಿನ್ನೆ ರಾತ್ರಿ ಮೂವರು ಮುಡಿಪು ಸಮೀಪದ ಬಾರ್‌ಲ್ಲಿ ನ್ಯೂಜಿಲ್ಯಾಂಡ್- ಆಸ್ಟ್ರೇಲಿಯಾ ಪಂದ್ಯಾಟ ವೀಕ್ಷಿಸಿದ ಬಳಿಕ ಬೈಕಿನಲ್ಲಿ ತೆರಳುವ ವೇಳೆ ಒಂದು ಸಮುದಾಯಕ್ಕೆ ಧಿಕ್ಕಾರ ಎಂದು ಬೊಬ್ಬಿಡುತ್ತಾ ತೆರಳಿದ್ದಾರೆ.
ಸುಬ್ಬಗೋಳಿ ಮಸೀದಿ ಬಳಿ ಎರಡು ಬಾರಿ ಧಿಕ್ಕಾರ ಕೂಗುತ್ತಾ ಹೋಗುವುದನ್ನು ಗಮನಿಸಿದ ಸ್ಥಳೀಯರು ಹಿಡಿದು ತರಾಟೆಗೆ ತೆಗೆದು ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಪರಿಸರದಲ್ಲಿ ಎಲ್ಲಾ ಧರ್ಮದವರು ಶಾಂತಿಯಿಂದ ಇದ್ದು, ಸಾಮರಸ್ಯದಿಂದಿದ್ದಾರೆ.ಆದರೆ ಕೆಲವು ಕಿಡಿಗೇಡಿಗಳು ಇಂತಹ ಕೃತ್ಯಕ್ಕೆ ಯತ್ನಿಸಿದ್ದಾರೆ. ಇದರಿಂದ ಒಂದು ಸಮುದಾಯದ ಮೇಲೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಅಂತಹ ಕಿಡಿಗೇಡಿಗಳನ್ನು ಬಂಧಿಸಿ, ಶಿಕ್ಷಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ