ಮಾಣಿ : ಎರಡು ದಿನಗಳ ಹಿಂದೆ ಮಾಣಿಯಲ್ಲಿ ಅಪಘಾತ ನಡೆದ ಸ್ಥಳದಲ್ಲಿ ನಡೆದ ಅಮಾನವೀಯ ರೀತಿಯ ಹಲ್ಲೆ ಪ್ರಕರಣದ ವೀಡಿಯೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು ಅದಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳನ್ನು ಬಂಧಿಸದೆ ಗಲಾಟೆ ಬಿಡಿಸಲು ಹೋದ ನಾಯಕತ್ವ ಗುಣಹೊಂದಿದ ವ್ಯಕ್ತಿಯಾಗಿರುತ್ತಾರೆ.
ಎಲ್ಲಾ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವ ನಿರಪರಾಧಿ ವ್ಯಕ್ತಿ ಸೂರಿಕುಮೇರು ಎಸ್‌ವೈಎಸ್ ಸಂಘಟನೆಯ ನಾಯಕರೂ ಆದಂತಹ ಹನೀಫ್ ಸಂಕ ಎಂಬವರನ್ನು ವಿಚಾರಣೆಯ ನೆಪದಲ್ಲಿ ಬಂಧಿಸಿ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಎಸ್‌ವೈಎಸ್ ಸೂರಿಕುಮೇರು ಬ್ರಾಂಚ್ ಅದ್ಯಕ್ಷ ಅಬ್ದುಲ್ ಕರೀಂ ಸೂರಿಕುಮೇರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.