ಪೂಂಚ್: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪೊಲೀಸ್ ವಾಹನ ಸ್ಕಿಡ್ ಆಗಿ ನದಿಗೆ ಬಿದ್ದ ಪರಿಣಾಮ ಇಬ್ಬರು ಪೊಲೀಸ್ ಅಧಿಕಾರಿಗಳು ಮೃತಪಟ್ಟು, ಇನ್ನುಳಿದ ನಾಲ್ವರು ಗಂಭೀರವಾಗಿ ಗಾಯಗೊಂಡ ದುರ್ಘಟನೆ ಪೂಂಚ್‌ನ ಬಫ್ಲಿಯಾಜ್ ಪ್ರದೇಶದಲ್ಲಿರುವ ಡ್ರೋಗ್ಜಿಯನ್ ಎಂಬ ಗ್ರಾಮದಲ್ಲಿ ನಡೆದಿದೆ.
ಪೂಂಚ್‌ನ ಹಿರಿಯ ಪೊಲೀಸ್ ಅಧೀಕ್ಷಕರ ಬೆಂಗಾವಲು ವಾಹನ ಇದಾಗಿದ್ದು, ಚಾಲಕ ನಿಯಂತ್ರಣ ಕಳೆದುಕೊಂಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ವಿಭಾಗೀಯ ಪೊಲೀಸ್ ಆಯುಕ್ತ ರಾಘವ್ ಲಾಂಗರ್ ಜಮ್ಮುವಿಗೆ ಭೇಟಿ ನೀಡಿದ್ದರು. ಅವರಿಗೆ ಭದ್ರತೆ ನೀಡಲು ಪೂಂಚ್ ಎಸ್ಎಸ್ಪಿ ವಿನೋದ್ ಕುಮಾರ್ ನೇತೃತ್ವದ ತಂಡ ಅಲ್ಲಿಗೆ ಹೋಗಿತ್ತು. ಅದಾದ ಬಳಿಕ ಪೀರ್ ಕಿ ಗಲಿಯಿಂದ ಮೊಘಲ್ ರಸ್ತೆಯಲ್ಲಿ ಈ ಬೆಂಗಾವಲು ವಾಹನಗಳೆಲ್ಲ ಬರುತ್ತಿದ್ದವು. ಈ ಪೊಲೀಸ್ ವಾಹನದಲ್ಲಿ ಒಟ್ಟು 6 ಮಂದಿ ಪೊಲೀಸ್ ಸಿಬ್ಬಂದಿಯಿದ್ದು, ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ