';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬದಿಯಡ್ಕ: ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿ ಪ್ರಿಯಕರನ ಜೊತೆ ಪೊಲೀಸ್ ಠಾಣೆಗೆ ಹಾಜರಾದ ಘಟನೆ ಬದಿಯಡ್ಕದಲ್ಲಿ ವರದಿಯಾಗಿದೆ.
ಬೋವಿಕ್ಕಾನ ಪರಿಸರದ ಅಪ್ರಾಪ್ತ ವಿದ್ಯಾರ್ಥಿನಿ ಮಂಗಳವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಳು. ಈಕೆ ಕಾಲೇಜೊಂದರಲ್ಲಿ ಪದವಿ ವಿದ್ಯಾರ್ಥಿನಿಯಾಗಿದ್ದು, ಕಾಲೇಜಿಗೆಂದು ಹೋದವಳು ಮನೆಗೆ ಹಿಂತಿರುಗಲಿಲ್ಲ.ಈ ಬಗ್ಗೆ ಮನೆಯವರು ಆದೂರು ಪೊಲೀಸರಿಗೆ ದೂರು ನೀಡಿದ್ದರು.
ಇದೇ ವೇಳೆ ಈಕೆ ಪೆರ್ಲ ಬಳಿಯಲ್ಲಿ ಪ್ರಿಯಕರನ ಜೊತೆ ಇರುವುದಾಗಿ ತಿಳಿದು ಬಂದಿದೆ. ಅದರಂತೆ ಬುಧವಾರ ಬೆಳಗ್ಗೆ ಯುವತಿ ಹಾಗೂ ಪ್ರಿಯಕರ ಬದಿಯಡ್ಕ ಠಾಣೆಗೆ ಹಾಜರಾಗಿದ್ದಾರೆ.ಈ ಮಾಹಿತಿ ತಿಳಿದ ಆದೂರು ಪೊಲೀಸರು ಬದಿಯಡ್ಕಕ್ಕೆ ಆಗಮಿಸಿ ಯುವತಿ ಮತ್ತು ಪ್ರಿಯಕರನನ್ನು ಆದೂರಿಗೆ ಕರೆದೊಯ್ತು ಸಮಗ್ರ ತನಿಖೆ ನಡೆಸಿದ್ದಾರೆ.