dtvkannada

ಮಾಣಿ: ಎಸ್ಸೆಸ್ಸೆಫ್ ಮತ್ತು ಎಸ್‌ವೈ‌ಎಸ್ ಸೂರಿಕುಮೇರು ಬ್ರಾಂಚ್ ವತಿಯಿಂದ ಜೀಲಾನಿ ತಿಂಗಳ ಪ್ರಯುಕ್ತ ಕುತುಬಿಯ್ಯತ್ ರಾತೀಬ್ ಕಾರ್ಯಕ್ರಮವು ಸೂರಿಕುಮೇರ್’ನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ದುಃಆ ನಡೆಸಿಕೊಟ್ಟು ಪ್ರಾಸ್ತಾವಿಕ ಭಾಷಣ ಮಾಡಿದ ದಾರುಲ್ ಅಶ್‌ಅರಿಯ್ಯಾ ಶಿಲ್ಪಿ ಮುಹಮ್ಮದ್ ಅಲೀ ಸಖಾಫಿ ಸುರಿಬೈಲು, ಅಲ್ಲಾಹನ ಔಲಿಯಾಗಳು ಮಹಾತ್ಮರುಗಳು ಉಲಮಾ ಸಯ್ಯಿದ್‌ಗಳು ಸಹಿತ ಗೌರವಕ್ಕೆ ಅರ್ಹರಾದ ವ್ಯಕ್ತಿಗಳು ವಸ್ತುಗಳನ್ನು ಗೌರವಿಸದೆ ಅಹಂಕಾರಿಯಾದರೆ ಇಬ್ಲೀಸನಿಗೆ ಬಂದೊದಗಿದ ಗತಿ ಬರುತ್ತದೆ ಈ ವಿಷಯದಲ್ಲಿ ಆಲಿಂ‌ಗಳನ್ನು ತಂಙಳ್‌ಗಳನ್ನು ನಿಂದಿಸುತ್ತಾ ಕಾಲ ಕಳೆಯುವವರು ಬಹಳ ಎಚ್ಚರಿಕೆಯಿಂದ ಇರಬೇಕು, ಮಹಾತ್ಮರ ಸ್ಥಾನಮಾನಗಳೇನು ಎಂಬುವುದಕ್ಕೆ ಒಂದು ಚಿಕ್ಕ ಉದಾಹರಣೆಯಾಗಿದೆ ಇತ್ತೀಚಿಗೆ ಸಮಾಧಿ ಸ್ಥಳಾಂತರಗೊಂಡ ಮಹಾನರಾದ ಸಜೀಪ ಉಸ್ತಾದ್, 27 ವರ್ಷದ ಹಿಂದೆ ಮರಣಹೊಂದಿದ ಅವರ ಸಮಾಧಿ ಸ್ಥಳವು ಅಗೆದಾಗ ಕಸ್ತೂರಿಯ ಪರಿಮಳದಿಂದ ಪುಳಕಿತಗೊಂಡಿರುವ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಆದ್ದುದ್ದರಿಂದ ಮಹಾತ್ಮರನ್ನು ನಿಂದಿಸಿ ಅವಮಾನಿಸಿ ಎಷ್ಟೇ ನಮಾಝ್ ನಿರ್ವಹಿಸಿದರೂ ಉಪವಾಸ ಹಿಡಿದರೂ ಪ್ರಯೋಜನವಿಲ್ಲ ಕೊನೆಗೆ ಇಬ್ಲೀಸನ ಗತಿ ಬರುತ್ತದೆ ಎಚ್ಚರಿಕೆಯಿಂದಿರಿ ಎಂದು ಹೇಳಿದರು.

ಕೆಸಿಎಫ್ ರಿಯಾದ್ ಝೋನ್ ಸಂಘಟನಾ ಇಲಾಖೆ ಚೆಯರ್ಮೆನ್ ಮುಸ್ತಫಾ ಸಅದಿ ಸೂರಿಕುಮೇರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.

ಕಾರ್ಯಕ್ರಮದಲ್ಲಿ ಎಸ್‌ವೈ‌ಎಸ್ ಜಿಲ್ಲಾ ಕೌನ್ಸಿಲರ್‌ಗಳಾದ ಎಸ್ ಆರ್ ಸುಲೈಮಾನ್ ಸೂರಿಕುಮೇರು, ಹಾಜಿ ಯೂಸುಫ್ ಸೂರಿಕುಮೇರು, ಎಸ್‌ವೈ‌ಎಸ್ ಸೂರಿಕುಮೇರು ಬ್ರಾಂಚ್ ಅಧ್ಯಕ್ಷ ಅಬ್ದುಲ್ ಕರೀಂ, ಕೋಶಾಧಿಕಾರಿ ಇಬ್ರಾಹಿಂ ಮುಸ್ಲಿಯಾರ್ ಹಳೀರ, ಹಂಝ ಕಾಯರಡ್ಕ, ಅಬ್ದುಲ್ ಫತ್ತಾಹ್ ಮಾಣಿ, ಲತೀಫ್ ಮಾಣಿ, ಉಮ್ಮರ್ ಕಾಯರಡ್ಕ,ಎಸ್ಸೆಸ್ಸೆಫ್ ನಾಯಕರಾದ ಉಮ್ಮರ್ ಫಾರೂಕ್ ಸೂರಿಕುಮೇರು, ನೌಶಾದ್ ಉಮ್ಮರ್ ಸೂರಿಕುಮೇರು, ಇಮ್ರಾನ್ ಸೂರಿಕುಮೇರು ಮುಂತಾದವರು ಉಪಸ್ಥಿತರಿದ್ದರು.ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು.

By dtv

Leave a Reply

Your email address will not be published. Required fields are marked *

error: Content is protected !!