ಉಪ್ಪಿನಂಗಡಿ: ಆಲ್ಟೋ ಕಾರು ಮತ್ತು ಪಿಕಪ್ ವಾಹನ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ಇಂದು ಸಂಜೆ 7:30 ರ ಹೊತ್ತಿಗೆ ನಡೆದಿದೆ.
ವಿರುದ್ದ ದಿಕ್ಕಿನಿಂದ ಬಂದ ಪಿಕಪ್ ಆಲ್ಟೋ ಕಾರ್ ಗೆ ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಮೂರು ಮಹಿಳೆಯರು ಸೇರಿ ಚಾಲಕನಿಗೆ ಗಾಯಗಳಾಗಿವೆ.
ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಅಪಘಾತದಲ್ಲಿ ಒಬ್ಬರು ಮಹಿಳೆಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.