ಉಪ್ಪಿನಂಗಡಿ: ಕ್ಷುಲ್ಲಕ ಕಬಾಬ್ ವಿಚಾರವನ್ನಿಟ್ಟುಕೊಂಡು ಐದಾರು ಜನರ ಗುಂಪು ಬಡಪಾಯಿ ಫಾಸ್ಪ್ ಫುಡ್ ನಡೆಸುತ್ತಿದ್ದವರ ಮೇಲೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿರುತ್ತಾರೆ. ಮತ್ತು ತಮ್ಮ ದೂರದಲ್ಲಿ ನಿಲ್ಲಿಸಿದ ಕಾರುಗಳಲ್ಲಿ ಹಲ್ಲೆ ನಡೆಸಿ ಪರಾರಿಯಾಗಿರುತ್ತಾರೆ.
ಈ ತರಹದ ಘಟನೆಗಳು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪದೇ ಪದೇ ಆವರ್ತಿಸುತ್ತಿದ್ದು ಕೋಮುಗಲಭೆ ನಡೆಸುವ ಸಂಘಪರಿವಾರದ ಹಿಡನ್ ಅಜೆಂಡವಾಗಿ ಕಂಡು ಬರುತ್ತಿದ್ದು. ನಿರಂತರವಾದ ಹಲ್ಲೆಗಳನ್ನು ಗಮನಿಸಿದಾಗ ಪ್ರಿಪ್ಲಾನ್ ಕೂಡ ಎಂಬುವುದು ಸಾಮಾನ್ಯ ಜನರಿಗೂ ಅರ್ಥವಾಗುತ್ತದೆ.ಪೊಲೀಸ್ ಇಲಾಖೆ ಇಂತಹ ಸಮಾಜ ಘಾತುಕ ಕಿಡಿಗೇಡಿಗಳ ವಿರುದ್ಧ ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಬೇಕು.
ಜನರ ಸಂಯಮವನ್ನು ನಿರಂತರವಾಗಿ ಸಂಘ ಪರಿವಾರ ಪರೀಕ್ಷಿಸುತ್ತಿದೆ. ಪೋಲಿಸ್ ಇಲಾಖೆ ನಿರಾಸಕ್ತಿ ತೋರಿದರೆ ಸಂಯಮದ ಕಟ್ಟೆ ಒಡೆದು ಜನರೇ ಬುದ್ದಿಕಲಿಸುವ ದಿನಗಳು ದೂರವಿಲ್ಲ ಎಂದು ಉಪ್ಪಿನಂಗಡಿ ಬ್ಲಾಕ್ ಸಮಿತಿ ಅಧ್ಯಕ್ಷರಾದ ಮುಸ್ತಫ ಲತೀಫಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದು ಉಪ್ಪಿನಂಗಡಿಯಲ್ಲಿ ನಡೆದ ಘಟನೆಯನ್ನು ತೀವ್ರ ಶಬ್ದಗಳಿಂದ ಖಂಡಿಸಿರುತ್ತಾರೆ.