';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಕಾಲೇಜು ವಿದ್ಯಾರ್ಥಿಗಳನ್ನು ಹಿಂಬಾಲಿಸಿಕೊಂಡು ಬಂದ ಅಪರಿಚಿತ ಯುವಕರ ಗುಂಪಿನ ಹಾಗೂ ವಿದ್ಯಾರ್ಥಿಗಳ ಮದ್ಯೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ಇಂದು ಸಂಜೆ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ನಡೆದಿದೆ.
ಅಪರಿಚಿತ ಯುವಕರ ಗುಂಪೊಂದು ವಿದ್ಯಾರ್ಥಿನಿಯರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ತಮ್ಮ ಸಹಪಾಠಿ ಗೆಳೆಯರಲ್ಲಿ ತಿಳಿಸಿದ್ದಾರೆ. ಆಗ ಸಹಪಾಠಿ ವಿದ್ಯಾರ್ಥಿಗಳು ಆಗಮಿಸಿ ಹಿಂಬಾಲಿಸಿಕೊಂಡು ಬಂದ ಯುವಕರಲ್ಲಿ ಪ್ರಶ್ನಿಸಿದ್ದಾರೆ. ಅಲ್ಲಿ ಮಾತಿಗೆ ಮಾತು ಬೆಳೆದು ಚಕಮಕಿ ಯಾಗಿದೆ.
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕರನ್ನು ಪುತ್ತೂರು ಮಹಿಳಾ ಠಾಣೆಗೆ ಕರೆದೊಯ್ದಿದ್ದಾರೆ. ಅಪರಿಚಿತ ಯುವಕರು, ನಾವು ವಿದ್ಯಾರ್ಥಿನಿಯರನ್ನು ಹಿಂಬಾಲಿಸಿದ್ದಲ್ಲ, ಅವರ ಮುಂದಿದ್ದ ಸಾರ್ವಜನಿಕರ ವ್ಯಕ್ತಿಗಳಿಬ್ಬರನ್ನು ಹಿಂಬಾಲಿಸಿದ್ದು.! ಆದರೆ ವಿದ್ಯಾರ್ಥಿನಿಯರು ನಮ್ಮನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ