ಮನುಷ್ಯನಾಗಿ ಹುಟ್ಟಿದ ಮೇಲೆ ಮನೆ ಕಟ್ಟುವ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ ಎಂದು ಹೇಳಬಹುದು. ತಮ್ಮ ಸ್ವಂತ ಮನೆಯಲ್ಲಿ ವಾಸ ಮಾಡಬೇಕು ಮತ್ತು ಹೆತ್ತವರನ್ನ ತಮ್ಮ ಸ್ವಂತ ಮನೆಯಲ್ಲಿ ಸಾಕಬೇಕು ಅನ್ನುವ ಬಯಕೆ ಈಗಿನ ಕಾಲದ ಪ್ರತಿಯೊಬ್ಬರಿಗೂ ಇದೆ ಎಂದು ಹೇಳಬಹುದು.
ಇನ್ನು ಸ್ವಂತ ಜಾಗ ಮತ್ತು ಕೆಲವರು ಕೈಯಲ್ಲಿ ಹಣ ಇಲ್ಲದೆ ತಮ್ಮ ಎಲ್ಲಾ ಆಸೆಗಳನ್ನ ಬದಿಗಿಟ್ಟು ಜೀವನ ಮಾಡುತ್ತಿರುತ್ತಾರೆ. ಇನ್ನು ಅದೆಷ್ಟೋ ಜನರು ಸ್ವಂತ ಮನೆ ಕಟ್ಟಲು ಎಲ್ಲಾ ತಯಾರಿಗಳನ್ನು ಮಾಡಿದ್ದು ಕೆಲವರ ಮನೆಯ ಕೆಲಸಗಳು ಅರ್ಧಕ್ಕೂ ನಿಂತಿರುವುದೇ ಹೆಚ್ಚಾಗಿದೆ ಎಂದು ಹೇಳಬಹುದು.
ಇನ್ನು ಈಗ ಮನೆ ಕಟ್ಟುತ್ತಿರುವವರಿಗೆ ಮತ್ತು ಮುಂದಿನ ದಿನಗಳಲ್ಲಿ ಮನೆಯನ್ನ ಕಟ್ಟಬೇಕು ಅನ್ನುವ ಆಸೆ ಹೊಂದಿರುವವರಿಗೆ ಈಗ ದೊಡ್ಡ ಶಾಕಿಂಗ್ ಸುದ್ದಿ ಬಂದಿದ್ದು ಇದು ಜನರ ಕೋಪಕ್ಕೆ ಕೂಡ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ಏನದು ಶಾಕಿಂಗ್ ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ದೇಶದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ಆಗುತ್ತಿರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ, ಆದರೆ ಈಗ ಮನೆ ಕಟ್ಟಲು ಬೇಕಾಗುವ ಪ್ರಮುಖ ವಸ್ತುಗಳ ಬೆಲೆ ದುಪ್ಪಟ್ಟಾಗಿದ್ದು ಇದು ಜನರ ಶಾಕ್ ಗೆ ಕಾರಣವಾಗಿದೆ.
ಮನೆ ಕಟ್ಟೋರಿಗೆ ಇದೀಗ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಕಬ್ಬಿಣ, ಇಟ್ಟಿಗೆ ಮತ್ತು ಸಿಮೆಂಟ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕಬ್ಬಿಣ, ಸಿಮೆಂಟ್, ಮರಳು, ಇಟ್ಟಿಗೆ ಸೇರಿ ಎಲ್ಲಾ ವಸ್ತುಗಳ ಬೆಲೆಯೂ ಬಹುತೇಕ ದುಪ್ಪಟ್ಟಾಗಿದೆ. ಹೌದು ಶೇಣೀತಾರೆ ಮನೆ ಕಟ್ಟಲು ಬೇಕಾಗುವ ವಸ್ತುಗಳ ಬೆಲೆಯಲ್ಲಿ ಬರೋಬ್ಬರಿ ಶೇಕಡಾ 40 ರಿಂದ 50 ರಷ್ಟು ಏರಿಕೆ ಆಗಿದ್ದು ಬಹುತೇಕ ಎಲ್ಲಾ ಬೆಲೆಗಳು ದುಪ್ಪಟ್ಟಾಗಿದೆ ಎಂದು ಹೇಳಬಹುದು.
ಇನ್ನು ಕೆಲವು ಇಂಜಿನಿಯರ್ ಗಳು ಹೇಳುವ ಪ್ರಕಾರ ಸಾಮಾನ್ಯವಾಗಿ ಕಳೆದ ವರ್ಷ ಒಂದು ಸಾಧಾರಣ ಮನೆ ಕಟ್ಟಲು 12 ಲಕ್ಷ ರೂಪಾಯಿ ವೆಚ್ಚ ಆಗುತ್ತಿತ್ತು, ಆದರೆ ಈಗ ಅದೇ ಮನೆಯನ್ನು ನಿರ್ಮಿಸಲು ಸಾಧಾರಣ 20 ಲಕ್ಷ ರೂಪಾಯಿ ಬೇಕು ಎಂದು ಇಂಜಿನಿಯರ್ ಗಳು ತಮ್ಮ ಅಭಿಪ್ರಾಯವನ್ನು ಹೇಳುತ್ತಿದ್ದಾರೆ.
ಇನ್ನು ಮನೆ ಕಟ್ಟಲು ಇಂಟೀರಿಯರ್ ಗಳಾಗಿ ಬಳಸುವ ಮರ, ಟೈಲ್ಸ್, ಸ್ಯಾನಿಟರಿ ಸಲಕರಣೆ ಇತ್ಯಾದಿಗಳ ಬೆಲೆಗಳು ಸಹ ಹೆಚ್ಚಳವಾಗಿದೆ. ಇನ್ನು ಒಂದು ವರ್ಷದ ಅವಧಿಯಲ್ಲಿ ಮನೆ ಕಟ್ಟಲು ಬೇಕಾಗುವ ಪ್ರಮುಖ ವಸ್ತುಗಳಲ್ಲಿ ಒಂದಾದ ಕಬ್ಬಿಣದ ಬೆಲೆಯಲ್ಲಿ ಶೇಕಡಾ 58 ರಷ್ಟು ಏರಿಕೆಯಾದರೆ ಪಿವಿಸಿ ಪೈಪ್ ದರ ಶೇಕಡಾ 40 ರಷ್ಟು ಏರಿಕೆ ಆಗಿದೆ. ಇನ್ನು ಎಲೆಕ್ಟ್ರಿಕಲ್ ಕೇಬಲ್‌ಗಳ ದರ ಶೇಕಡಾ 45 ರಷ್ಟು ಏರಿಕೆಯಾದರೆ ಸ್ಯಾನಿಟರಿ ಸಲಕರಣೆಗಳ ದರ ಶೇಕಡಾ 15 ರಷ್ಟು ಏರಿಕೆಯಾಗಿದೆ. ಇನ್ನು ಇನ್ನು ಒಂದು ಟನ್ ಗೆ 54 ಸಾವಿರ ಇದ್ದ ಕಬ್ಬಿಣದ ದರ ಈಗ 68 ರಿಂದ 78 ಸಾವಿರಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ ವರ್ಷ 300 ರೂಪಾಯಿ ಇದ್ದ ಸಿಮೆಂಟ್ ದರದಲ್ಲಿ ಭಾರಿ ಪ್ರಮಾಣದ ಏರಿಕೆ ಆಗಿದ್ದು ಇಂದು ಸಿಮೆಂಟ್ ಅಂಗಡಿಯಲ್ಲಿ ಒಂದು ಚೀಲ ಸಿಮೆಂಟ್ ದರ 430 ರಿಂದ 450 ರೂಪಾಯಿ ಆಗಿದೆ. ಇನ್ನು ಮರಳಿನ ಬೆಲೆಯಲ್ಲಿ ಕೂಡ ಭಾರಿ ಏರಿಕೆಯಾಗುವುದರ ಜೊತೆಗೆ ಜಿಎಸ್ ಟಿ ಹೊರೆಯೂ ಹೆಚ್ಚಾಗುತ್ತಿದ್ದು ಮನೆ ಕಟ್ಟೋರಿಗೆ ತೀವ್ರ ಸಂಕಷ್ಟ ಎದುರಾಗಿದೆ. ಸ್ನೇಹಿತರೆ ಈ ಮಾಹಿತಿಯನ್ನ ಮನೆ ಕಟ್ಟುತ್ತಿರುವ ಎಲ್ಲರಿಗೂ ತಲುಪಿಸಿ ಇದರ ಬಗ್ಗೆ ಕಮೆಂಟ್ ಮೂಲಕ ಅಭಿಪ್ರಾಯ ತಿಳಿಸಿ.