ಅಪ್ಪು ಅವರಿಗಾಗಿ ಕನ್ನಡ ಚಿತ್ರೋದ್ಯಮ ಪುನೀತ್ ನಮನ ಕಾರ್ಯಕ್ರಮ ನಡೆಸಿತು. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಮತ್ತು ರಾಜಕೀಯ ರಂಗದ ಹಲವು ಗಣ್ಯರು ಬಂದಿದ್ದರು.
ಈ ಕಾರ್ಯಕ್ರಮಕ್ಕಿಂತ ಮೊದಲು, ಅಪ್ಪು ಅವರು ಇಲ್ಲವಾಗಿ 11 ನೇ ದಿನದಂದು ಇಡೀ ದೊಡ್ಮನೆ ಕುಟುಂಬದವರು ಅಪ್ಪು ಅವರಿಗೆ ಪೂಜೆ ಮಾಡಿದರು. ಹಾಗೆಯೇ ಚಿತ್ರರಂಗದ ಸಾಕಷ್ಟು ಗಣ್ಯರು ಸಹ 11ನೇ ದಿನದ ಪುಣ್ಯ ಸ್ಮರಣೆಗೆ ಬಂದಿದ್ದರು.
12ನೇ ದಿನದಂದು ದೊಡ್ಮನೆ ಕುಟುಂಬ ಪುನೀತ್ ಅವರ ಅಭಿಮಾನಿಗಳಿಗೆ ಅನ್ನದಾನ ಮಾಡಿದರು. ಈ ಎಲ್ಲಾ ಕಾರ್ಯಗಳು ಒಂದು ಕಡೆ ನಡೆದರೆ ಮತ್ತೊಂದು ಕಡೆ ನಟ ವಿನೋದ್ ರಾಜ್ ಮತ್ತು ಅವರ ತಾಯಿ ಲೀಲಾವತಿ ಅವರು ಬೇರೊಂದು ಜಾಗದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ತರ್ಪಣ ಬಿಟ್ಟರು. ಶ್ರಾದ್ಧ ಮಾಡಿದರು.
ಶ್ರೀರಂಗಪಟ್ಟಣದ ತ್ರಿವೇಣಿ ಸoಗಮದಲ್ಲಿ ತಾಯಿ ಮತ್ತು ಅವರ ಸಂಬಂಧಿಕರ ಜೊತೆ ಶ್ರಾದ್ಧ ಮಾಡಿದರು.ಇದಕ್ಕೆ ಕಾರಣವನ್ನು ಸಹ ಹೇಳಿದರು. ಪುನೀತ್ ಅವರು ನನ್ನ ಸಹೋದರನ ಸಮಾನ ಅವರಿಗೆ ಶಾoತಿ ಸಿಗಬೇಕು ಎಂದು ಶ್ರಾದ್ಧ ಮಾಡಿದ್ದೇವೆ ಎಂದು ವಿನೋದ್ ರಾಜ್ ಅವರು ಹೇಳಿದರು.
ರಾಜ್ ಕುಟುಂಬದ ಜೊತೆ ಸೇರದೆ, ಬೇರೆ ಕಡೆ ವಿನೋದ್ ರಾಜ್ ಹಾಗು ತಾಯಿ ಲೀಲಾವತಿ ಅವರು ಅಪ್ಪು ಅವರ ಕಾರ್ಯ ಮಾಡಿರುವ ಬಗ್ಗೆ ಇಲ್ಲಿಯ ವರೆಗೆ ಶಿವಣ್ಣ ಏನು ಹೇಳಿರಲಿಲ್ಲ. ಈಗ ಇದರ ಬಗ್ಗೆ ಮೊದಲ ಬಾರಿಗೆ ಮಾತಾಡಿದ್ದಾರೆ.
ಇದಕ್ಕೆ ನಟ ಶಿವ ರಾಜ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿ, “ಅಪ್ಪು ಅಭಿಮಾನಿಗಳು ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಅದನ್ನೆಲ್ಲ ನಾವು ಒಪ್ಪಿಕೊಳ್ಳಬೇಕು ಎಂದು ಹೇಳಿದ ಶಿವಣ್ಣ, ವಿನೋದ್ ರಾಜ್ ಮತ್ತು ನಟಿ ಲೀಲಾವತಿ ಅವರು ಮಾಡಿರುವ ಕೆಲಸದ ಬಗ್ಗೆ ಕೂಡ ಇದೇ ರೀತಿ ಮಾತನಾಡಿ “ಎಲ್ಲಾ ಒಳ್ಳೆಯದೇ ಎಲ್ಲವನ್ನು ಒಪ್ಪಿಕೊಳ್ಳಬೇಕು, ಅದು ಅಪ್ಪು ಮೇಲೆ ವಿನೋದ್ ಗೆ ಇರುವ ಪ್ರೀತಿ ಅಷ್ಟೇ!” ಎಂದು ಹೇಳಿ, ಆ ವಿಷ್ಯದ ಬಗ್ಗೆ ಹೆಚ್ಚು ಮಾತಾಡಲಿಕ್ಕೆ ಇಷ್ಟವಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಅಣ್ಣಾವ್ರ ಕುಟುಂಬ ಅಪ್ಪು ಅವರ ೧೧ ದಿನದ ಕಾರ್ಯವನ್ನು ಅಪ್ಪು ಅವರ ಮನೆಯಲ್ಲಿ ಮಾಡಿ ನಂತರ, ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸದ್ದರು. ಆದರೆ ಅವತ್ತಿನ ದಿನ ವಿನೋದ್ ರಾಜ್ ಹಾಗು ತಾಯಿ ಲೀಲಾವತಿ ಅವರು ಶ್ರೀರಂಗಪಟ್ಟಣದಲ್ಲಿ ಅಪ್ಪು ಅವರಿಗೆ ಕಾರ್ಯ ಮಾಡಿ, ತರ್ಪಣ ಬಿಟ್ಟಿದ್ದರು. ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿತ್ತು.