ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಖ್ಯಾತ ಉಧ್ಯಮಿ, ಇತ್ತೀಚೆಗಷ್ಟೇ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಕಾರು ಖರೀದಿಸಿ ಸುದ್ದಿಯಲ್ಲಿದ್ದ ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್ ಶರೀಫ್ ಅವರನ್ನು ಬೆಂಗಳೂರು ನಗರ ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದೆ.
ಗುಜರಿ ಅಂಗಡಿಯ ಮೂಲಕ ಉಧ್ಯಮ ಪ್ರಾರಂಭಿಸಿ ಯಶಸ್ವಿ ಉಧ್ಯಮಿಯಾದ ಗುಜರಿ ಬಾಬು ಅಲಿಯಾಸ್ ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್ ಶರೀಫ್‌ರವರು ಬಹುಕೋಟಿ ಉಧ್ಯಮಿಯಾಗಿದ್ದು. ತನ್ನೂರಿನ ಸುಮಾರು ಇಪ್ಪತ್ತೈದು ಸಾವಿರ ವಿಧ್ಯಾರ್ಥಿಗಳ ಕಲಿಕೆಗೆ ನೆರವಾಗುವ ಉದ್ದೇಶದಿಂದ ಸ್ಕ್ಲಾಲರ್‌ಶಿಫ್ ನೀಡುವುದಾಗಿಯೂ ಇತ್ತೀಚೆಗಷ್ಟೇ ಘೋಷಿಸಿದ್ದರು.
ರಾಜಕೀಯಕ್ಕೆ ಬರುವ ಸುಳಿವನ್ನು ಈ ಹಿಂದೆಯೇ ನೀಡಿದ್ದ ಕೆಜಿಎಫ್ ಬಾಬು, ಇದೀಗ ಕಾಂಗ್ರೆಸ್ ಬಿಡುಗಡೆಗೊಳಿಸಿದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ.