dtvkannada

ಮಂಗಳೂರು: ಹಿಂದೂ ಜಾಗರಣ ವೇದೀಕೆಯಿಂದ ನಗರದಲ್ಲಿ ಇಂದು ಸುದ್ದಿಗೊಷ್ಠಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂ.ಜಾ.ವೆ. ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಧಾಕೃಷ್ಣ ಅಡ್ಯಂತಾಯ, ದ.ಕ ಜಿಲ್ಲಾಧಿಕಾರಿ ನೀಡಿದ ಕೇಸನ್ನು ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಲು ಪತ್ರಿಕಾಗೋಷ್ಠಿ ಕರೆದಿಲ್ಲ. ಉದ್ದೇಶಪೂರ್ವಕವಾಗಿ ಜಿಲ್ಲಾಧಿಕಾರಿಯನ್ನು ಅಪಮಾನ ಮಾಡಿಲ್ಲ. ಕೇಸಿಗೆ ಹೆದರಿ ತಲೆಬಗ್ಗಿ ಹೋಗುವವರು ನಾವಲ್ಲ ಎಂದರು.

ಜನರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ. ಇಂತಹ ನೂರು ಸಾವಿರ ಕೇಸ್‌ ಎದುರಿಸಲು ಹಿಂದೂ ಸಮಾಜ ಎದುರಿಸಲು ಸಿದ್ದ. ನಮ್ಮ ಭಾವನೆಗೆ ಬೆಲೆ ಇಲ್ವಾ, ಹಿಂದೂ ಸಮಾಜದ ಭಾವನೆಗೆ ಬೆಲೆ ಇಲ್ಲವೇ ಎಂದರು.
ಕಾರಿಂಜದಲ್ಲಿ ಅಕ್ರಮ ಗಣಿಗಾರಿಕೆ ನಡೆಯಬಾರದು. ಹಿಂದೂ ಸಮಾಜದ ಭಾವನೆ ಜೊತೆ ಚೆಲ್ಲಾಟವಾಡಬೇಡಿ ಎಂದು ಹೇಳಿದರು.

ದಕ್ಷಿಣ ಕನ್ನಡ ಡಿಸಿ ರಾಜೇಂದ್ರ ಕೆವಿ ರವರು ಎಲ್ಲಿ ದೂರು ದಾಖಲಿಸಿದ್ದಾರೋ ಅಲ್ಲಿಯ ಸಬ್‌ಇನ್ಸ್‌ಪೆಕ್ಟರ್ ಆದ‌ ಸೌಮ್ಯ ದೇವಸ್ಥಾನದ ಭಗವಾಧ್ವಜ ತೆಗೆಯಲು ಹೇಳುತ್ತಾರೆ.
ಇದೇನು ಘೋರಿ ಮಹಮ್ಮದ್‌, ಟಿಪ್ಪು ಕಾಲವೇ. ಒಂದೇ ವಾರದಲ್ಲಿ 1000 ಧ್ವಜ ಹಾಕುತ್ತೇವೆ ತಾಕತ್ತಿದ್ದರೆ ತಡೆಯಿರಿ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಕಿಶೋರ್ ಕುಮಾರ್, ರತ್ನಾಕರ್ ಶೆಟ್ಟಿ ಹಾಗೂ ಜಗದೀಶ್ ನೆತ್ತರಕೆರೆ ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!