dtvkannada

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ (ರಿ) ಬೆಂಗಳೂರು ವತಿಯಿಂದ ಇವರ ಸಾಹಿತ್ಯ ಹಾಗೂ ಇತರ ಕ್ಷೇತ್ರಗಳ ಸೇವೆಯನ್ನು ಗುರುತಿಸಿ ಉದಯೋನ್ಮುಖರಿಗೆ, ಯುವ ಪ್ರತಿಭೆಗಳಿಗೆ ಕೊಡಮಾಡುವ “ಉತ್ತಿಷ್ಠ ಸಾಧಕ ರತ್ನ” ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯೋತ್ಸವ ಸಂಭ್ರಮಾಚರಣೆ ಬೆಂಗಳೂರಿನ ನಕ್ಷತ್ರ ಹಾಲ್ , ಅಂಬರ್ ಎಲಿಗೆನ್ಸ್ ಕುಮಾರಸ್ವಾಮಿ ಲೇಔಟ್ ನಲ್ಲಿ ನವೆಂಬರ್ 22 ರಂದು ನಡೆಯಿತು. ಈ ಸಂದರ್ಭದಲ್ಲಿ ಕವಯತ್ರಿ, ನಿರೂಪಕಿ, ನೃತ್ಯಗಾರ್ತಿ, ಹಾಡುಗಾರ್ತಿ, ಬಹುಮುಖ ಪ್ರತಿಭೆ ಗಳ ರಶ್ಮಿ ಸನಿಲ್ (ರಶ್ಮಿತಾ) ಅವರಿಗೆ “ಉತ್ತಿಷ್ಠ ಸಾಧಕ ರತ್ನ” ರಾಜ್ಯ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು. ಉತ್ತಿಷ್ಠ ಚಾರಿಟೆಬಲ್ ಸೇವಾ ಟ್ರಸ್ಟ್ (ರಿ) ನ ಸಂಸ್ಥಾಪಕಾಧ್ಯಕ್ಷರಾಗಿರುವ ಶ್ರೀಮತಿ ಸುಜಾತ ಎಂ.ಹಾಗೂ ಗೌರವಾಧ್ಯಕ್ಷರಾಗಿರುವ ಶ್ರೀ ನರಸಿಂಹ ಮೂರ್ತಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ರಶ್ಮಿ ಸನಿಲ್ ಇವರು ಮೂಲತಃ ಮಂಗಳೂರಿನ, ಕೊಲ್ಯ ಸೋಮೇಶ್ವರದಲ್ಲಿ ಹುಟ್ಟಿ ಬೆಳೆದವಳು. ದಿವಂಗತ ಶ್ರೀ ಕೃಷ್ಣ ಕೊಟ್ಯಾನ್ ಹಾಗೂ ಶ್ರೀಮತಿ ನವೀನ ಕುಮಾರಿ ಇವರ ಸುಪುತ್ರಿ. ಮಂಗಳೂರಿನ ಖ್ಯಾತ ಕ್ರಿಕೆಟ್ ಆಟಗಾರ ನಿತೇಶ್ ಕೋಟ್ಯಾನ್ ಇವರ ಪತ್ನಿ.

ಎಂ. ಕಾಮ್ ಪದವೀಧರೆಯಾಗಿ ಇನ್ಫೋಸಿಸ್ ಸಂಸ್ಥೆಯಲ್ಲಿ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರಶ್ಮಿ ಸನಿಲ್ ಅವರು, ಕನ್ನಡ ತುಳು ಭಾಷೆಯಲ್ಲಿ ಹಿಡಿತವನ್ನು ಹೊಂದಿದ್ದು ನೂರಾರು ಕವನ ರಚಿಸಿ ಮನೆ ಮಾತಾದವರು, 70 ಕ್ಕೂ ಹೆಚ್ಚು ಅಂತರ್ಜಾಲ ಹಾಗೂ ನೇರ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಪ್ರೌಢಿಮೆ ತೋರಿರುವ ಇವರು ತನ್ನ ಕವನಗಳಿಗಾಗಿ 300 ಕ್ಕೂ ಅಧಿಕ ಬಹುಮಾನ ಪಡೆದುಕೊಂಡವರು, ಲೇಖಕಿಯಾಗಿ, ಬರಹಗಾರ್ತಿಯಾಗಿ, ನೃತ್ಯಪಟುವಾಗಿ, ನಿರೂಪಕಿಯಾಗಿಯೂ ಗಮನ ಸೆಳೆದವರು. ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಕೂಡ ಆಗಿರುವರು. ಯುವವಾಹಿನಿ, ರೋಟರಿ, ಮಹಿಳಾ ಮಂಡಳಿ, ಕಥಾ ಬಿಂದು, ಅಮೃತ ಪ್ರಕಾಶನ ಹಾಗೂ ಇನ್ನಿತರ ಸಂಸ್ಥೆಯ ಸದಸ್ಯರಾಗಿರುವರು.

By dtv

Leave a Reply

Your email address will not be published. Required fields are marked *

error: Content is protected !!