ಬೆಳ್ತಂಗಡಿ: ಹಿಂದೂ ಜಾಗರಣ ವೇದಿಕೆಯ ಮುಖಂಡ ರಾಧಾ ಕೃಷ್ಣ ಅಡ್ಯಂತಾಯ ಪತ್ರಿಕಾಗೋಷ್ಠಿಯೊಂದರಲ್ಲಿ ಪುಂಜಾಲಕಟ್ಟೆ ಠಾಣಾ ಎಸ್ಸೈ ಸೌಮ್ಯ ಇವರ ಕಾಲು ಮುರಿಯುತ್ತೇವೆ ಮತ್ತು ಕಾರಿಂಜದಲ್ಲಿ ಪ್ರಚೋಧನಾಕಾರಿ ಭಾಷಣಕಾರ ಹಿಂದೂ ಜಾಗರಣ ವೇದಿಕೆಯ ಜಗದೀಶ್ ಕಾರಂತ ಜಿಲ್ಲಾಧಿಕಾರಿಯ ಕೊರಳಪಟ್ಟಿ ಹಿಡಿಯುತ್ತೇವೆ ಎಂಬ ಬೆದರಿಕೆ ಹೇಳಿಕೆಗಳ ವಿರುದ್ಧ ಪುಂಜಾಲಕಟ್ಟೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಡಂತ್ಯಾರು ಡಿವಿಷನ್ ವತಿಯಿಂದ ಪ್ರತಿಭಟನೆ ನಡೆಯಿತು
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಹನೀಫ್ ಟಿ ಎಸ್ ಭಾಷಣವನ್ನು ಮಾಡಿದರು.
ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷರಾದ ಮುಸ್ತಾಫ ಜಿ ಕೆ, ಮಡಂತ್ಯಾರ್ ಡಿವಿಝನ್ ಅಧ್ಯಕ್ಷರಾದ ಅಬ್ದುಲ್ ರಝಕ್ ಬಿ ಎಮ್, ಎಸ್ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ನಿಸಾರ್ ಕುದ್ರಡ್ಕ, ಮಡಂತ್ಯಾರ್ ಗ್ರಾಮ ಪಂಚಾಯತ್ ಸದಸ್ಯರಾದ ಹನೀಫ್ ಪುಂಜಾಲಕಟ್ಟೆ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.