';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಕಾರು ಶೋರೂಂ ಆವರಣದೊಳಗೆ ಹಾಡುಹಗಲೇ ಕಾಡುಹಂದಿಯೊಂದು ನುಗ್ಗಿ ಒಬ್ಬನಿಗೆ ತಿವಿಯಲು ಯತ್ನಿಸಿ ಆತಂಕ ಸೃಷ್ಟಿಸಿದ ಘಟನೆ ನಗರದ ಪಡೀಲ್ ರೈಲ್ವೇ ಬ್ರಿಡ್ಜ್ ಬಳಿ ನಡೆದಿದೆ. ಈ ಘಟನೆ ಕಳೆದ ಬುಧವಾರ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ದಾಖಲಾದ ದೃಶ್ಯಗಳು ಸದ್ಯ ವೈರಲ್ ಆಗುತ್ತಿದೆ.
ಕಳೆದ ಬುಧವಾರ ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಶೋರೂಂ ಆವರಣದೊಳಗೆ ನುಗ್ಗಿದ ಕಾಡುಹಂದಿ, ಎರಡೆರಡು ಬಾರಿ ಒಡಾಡಿದೆ. ಅಲ್ಲಿದ್ದವರು ದಿಕ್ಕಾಪಾಲಾಗಿ ಓಡಿದ್ದಾರೆ.
ಓರ್ವನನ್ನು ಹಂದಿ ಬೆನ್ನಟ್ಟಿದ್ದು, ಅವರು ಪವಾಡ ಸದೃಶ ರೀತಿಯಲ್ಲಿ ತಪ್ಪಿಸಿಕೊಂಡಿದ್ದಾರೆ. ಕಾಡುಹಂದಿಯು ಹೆದ್ದಾರಿ ದಾಟಿ ಮುಖ್ಯ ದ್ವಾರದಲ್ಲೇ ಆವರಣ ಪ್ರವೇಶಿಸಿದ್ದು , ಬಳಿಕ ಪಕ್ಕದ ಹಾಡಿಗೆ ಮರಳಿದೆ ಎಂದು ತಿಳಿದು ಬಂದಿದೆ.