dtvkannada

ರಾಷ್ಟ್ರಿಯ ಸಂವಿಧಾನ ದಿನಾಚರಣೆಯ ಪ್ರಯುಕ್ತ ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜಿಸಿದ ನಮ್ಮ ಸಂವಿಧಾನ ಆಪ್ತ ಮಾತುಕತೆ ವಿಶೇಷ ಕಾರ್ಯಕ್ರಮದಲ್ಲಿ ವಿಮರ್ಶಕರು ಹಾಗೂ ಲೇಖಕರು ಆದ ಶ್ರೀ ಕಾಳಿಹುಂಡಿ ಶಿವಕುಮಾರ್ ಮೈಸೂರು ಮಾತನಾಡಿ ಭಾರತದ ಸಂವಿಧಾನವು ನಮಗೆ ಇರುವ ಅತೀ ದೊಡ್ಡ ಆಸ್ತಿಯು, ಅಭಯವು ಕೂಡ ಆಗಿದೆ. ಸಂವಿಧಾನವನ್ನು ನಾವೇಲ್ಲರು ಸಂಪೂರ್ಣವಾಗಿ ಅರಿಯುವ ಮೂಲಕ ಇತರರಿಗೆ ಜಾಗೃತಿ ಮೂಡಿಸುವವರಾಗಬೇಕೆಂದು ಅಭಿಪ್ರಾಯ ಪಟ್ಟರು.

ಇದೇ ವೇಳೆ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಹಾಶಿಂ ಬನ್ನೂರು, ರಾಜ್ಯ ಪ್ರಧಾನ ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಬೆಂಗಳೂರು ಉಪಸ್ಥಿತರಿದ್ದರು ಎಂದು ರಾಜ್ಯ ಸಂಚಾಲಕ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!