ಪುತ್ತೂರು: ಕೊರೊನಾ ಹೊಸ ರೂಪಾಂತರಿ ತಳಿ ಒಮಿಕ್ರಾನ್ (B.1.1529) ಪತ್ತೆ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಆರೋಗ್ಯ ಅಧಿಕಾರಿಗಳಿಂದ ಬಿಗು ತಪಾಸಣೆ ನಡೆಯುತ್ತಿದೆ.
ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಪ್ರಯಾಣಿಸುತ್ತಿರುವವರನ್ನು ತಡೆದು ನಿಲ್ಲಿಸಿ, ಅಲ್ಲೇ ಲಸಿಕೆ ನೀಡಲಾಗುತ್ತಿದೆ. ಪುತ್ತೂರಿನ ದರ್ಬೆ ಸರ್ಕಲ್ ಬಳಿ ಬಿರುಸಿನ ತಪಾಸಣೆ ನಡೆಯುತ್ತಿದೆ. ಲಸಿಕೆ ಹಾಕದೇ ಸುತ್ತಾಡುವವರನ್ನು ಪೊಲೀಸರ ಸಮ್ಮುಖದಲ್ಲಿ ತಡೆದು ನಿಲ್ಲಿಸಿ ಸ್ಥಳದಲ್ಲಿಯೇ ಒಂದನೇ ಅಥವಾ ಎರಡನೇಯ ಡೋಸ್ ನೀಡಲಾಗುತ್ತಿದೆ .
ಹೊಸ ತಳಿ ಹೆಚ್ಚು ವೇಗವಾಗಿ ಹರಡಲಿದೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿರುವುದರಿಂದ ರಾದ್ಯದಾಧ್ಯಂತ ಈಗಾಗಲೇ ಹೈ ಅಲರ್ಟ್ ಘೋಷಿಸಲಾಗಿದೆ. ವ್ಯಾಕ್ಸಿನ್ ಪ್ರೊಟೆಕ್ಷನ್ ಮೀರಿ ಸೋಂಕು ತೀವ್ರಗೊಳಿಸುವ ಬಗ್ಗೆ ತಜ್ಞರು ಎಚ್ಚರಿಸಿದ್ದು, ಆರೋಗ್ಯ ಇಲಾಖೆಯಿಂದ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.