ಬಂಟ್ವಾಳ : ಬೆಳಿಗ್ಗೆ 7 ಗಂಟೆಗೆ ಕ್ರಿಕೆಟ್ ಆಡಲು ಎಂದು ಹೋದ ಯುವಕನೋರ್ವ ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿ.ಮೂಡ ಗ್ರಾಮದ ತಾಳಿಪಡ್ಡು ನಿವಾಸಿ ಮುಹಮ್ಮದ್ ಫಾರೂಕ್ ನಾಪತ್ತೆಯಾದ ಯುವಕ ಎಂದು ತಿಳಿದುಬಂದಿದೆ.
ನ.28ರಂದು ಬೆಳಗ್ಗೆ 7:30ಕ್ಕೆ ಕ್ರಿಕೆಟ್ ಆಡಲೆಂದು ಮನೆಯಿಂದ ಹೋದವರು ಆ ಬಳಿಕ ಮನೆಗೆ ವಾಪಸ್ ಬಂದಿಲ್ಲವೆಂದು ಅವರ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.
ಮನೆಯಿಂದ ಹೋದ ಬಳಿಕ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.