ಕಾಸರಗೋಡು: ತನ್ನ ಪತಿ ಬೆಳಗ್ಗೆ ಕ್ರಿಕೆಟ್ ಆಟ ಆಡಲು ಮೈದಾನಕ್ಕೆ ಹೋದವರು ನಾಪತ್ತೆಯಾಗಿದ್ದಾರೆಂದು ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಿಸಿದ್ಧ ಪ್ರಕರಣವು ಇದೀಗ ರೋಚಕ ತಿರುವು ಪಡೆದುಕೊಂಡಿದೆ. ಕಾಸರಗೋಡಿನ ಪ್ರತಿಷ್ಠಿತ ಸುಲ್ತಾನ್ ಜ್ಯುವೆಲ್ಲರಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರ ವಂಚನೆ ನಡೆದಿದ್ದು, ಉದ್ಯೋಗಿಯು ಆಭರಣಗಳನ್ನು ದೋಚಿದ್ದಾನೆ ಎಂದು ವರದಿಯಾಗಿದೆ.
ಮಂಗಳೂರು-ಬಿ.ಸಿ ರೋಡ್ ನಿವಾಸಿ ಮುಹಮ್ಮದ್ ಫಾರೂಕ್ ವಂಚನೆ ಮಾಡಿರುವುದಾಗಿ ಹಿರಿಯ ಉದ್ಯೋಗಿಯೊಬ್ಬರು ಕಾಸರಗೋಡು ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಜ್ಯುವೆಲ್ಲರಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಫಾರೂಕ್, ಅಂಗಡಿಯಲ್ಲಿದ್ದ ಸುಮಾರು 2.5 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾನೆ. ಜ್ಯುವೆಲ್ಲರಿಯ ಲೆಕ್ಕ ಪರಿಶೋಧನೆ ಮಾಡಿದ ಸಂದರ್ಭದಲ್ಲಿ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಚಿನ್ನ ಮತ್ತು ವಜ್ರಗಳನ್ನು ಕಳ್ಳಸಾಗಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಜ್ಯುವೆಲ್ಲರಿ ಮಾಲೀಕರು ಕಳೆದುಹೋದ ಚಿನ್ನವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆಂದು ತಿಳಿದು ಬಂದಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಹೊರಬರಬೇಕಾಗಿದೆ.