ಮಂಗಳೂರು,ಡಿ 03: ಫ್ಯಾಸಿಸ್ಟರಿಂದ ಕರ್ನಾಟಕವನ್ನು ರಕ್ಷಿಸೋಣ ಎಂಬ ಘೋಷಣೆಯಲ್ಲಿ ಪಾಪ್ಯುಲರ್ ಫ್ರಂಟ್ ವತಿಯಿಂದ ಕಲ್ಲಾಪುವಿನ ಯುನಿಟಿ ಮೈದಾನದಲ್ಲಿ ಜಿಲ್ಲಾಧ್ಯಕ್ಷರಾರ ಇಜಾಝ್ ಅಹ್ಮದ್ ಇವರ ಅಧ್ಯಕ್ಷತೆಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಿತು.
ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ರಾಜ್ಯ ಉಪಾಧ್ಯಕ್ಷರಾದ ಅಯ್ಯೂಬ್ ಅಗ್ನಾಡಿ “NRC, CAA ವಿರೋಧಿ ಹೋರಾಟದಲ್ಲಿ ಬಾಗಿಯಾದ ನಾಗರಿಕರ ಜನಶಕ್ತಿ ಅದೇ ರೀತಿ ಅನ್ನದಾತ ರೈತನ ಹೋರಾಟದಲ್ಲಿ ಪ್ರಭುತ್ವದ ದಮನಕಾರಿ ನೀತಿಯಿಂದ ಹಿಂದೆ ಸರಿಸಲು ಅನಿವಾರ್ಯ ಪಡಿಸಿತು, ಅದೇ ರೀತಿ ಸಮಾಜಕ್ಕೆ ಕಂಟಕವಾಗಿರುವ ಫ್ಯಾಸಿಸ್ಟ್ ರ ಕೈಯನ್ನು ಹಿಮ್ಮೆಟ್ಟಿಸಲು ಇಂದು ಸಮಾನ ಮನಸ್ಕರು ಜೊತೆ ಗೂಡಿ ಪ್ರಯತ್ನ ನಡೆಸಬೇಕಾಗಿದೆ ಎಂದರು.
ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದ ಪಾಪ್ಯುಲರ್ ಫ್ರಂಟ್ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ ಶಾಕಿಫ್ “75 ವರ್ಷಗಳ ಸ್ವಾತಂತ್ರ್ಯ ನಂತರದ ಇತಿಹಾಸ ಅವಲೋಕಿಸಿದಾಗ ಎಲ್ಲಾ ದೌರ್ಜನ್ಯದ ಹಿಂದೆ ಆರೆಸ್ಸೆಸ್ ಎಂಬ ದೇಶದ ಕ್ಯಾನ್ಸರ್ ಕೆಲಸ ಮಾಡುತ್ತಿದೆ. ಮೋದಿ ಅಧಿಕಾರಕ್ಕೆ ಬಂದು 2 ಕೋಟಿ ಉದ್ಯೋಗದಷ್ಟು ನಷ್ಟ ವಾಗಿದೆ.ಕೇಂದ್ರ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ.RSS ಯಾವಾಗ ಸಾಯುತ್ತದೋ ಆ ದಿನ ಭಾರತ ಅಭಿವೃದ್ಧಿಯಾಗಲಿದೆ ಎಂದರು.ನೀವು ಪಾಪ್ಯುಲರ್ ಫ್ರಂಟ್ ವಿರುದ್ಧ ಎಷ್ಟು ಸುಳ್ಳು ಹರಡಿದರು ನಾವು ಭಯ ಪಡುವುದಿಲ್ಲ,ನಮ್ಮ ಕೆಲಸ ಮುಂದುವರಿಸುತ್ತಲೇ ಇರುತ್ತೇವೆ.” ಎಂದು ಸವಾಲೆಸಿದರು.
ರಾಜ್ಯ ಕಾರ್ಯದರ್ಶಿ ಎ.ಕೆ ಅಶ್ರಫ್ ಮಾತನಾಡಿ “ಜಿಲ್ಲಾಧಿಕಾರಿಯ ಕೊರಳಪಟ್ಟಿ ಹಿಡಿಯುತ್ತೇವೆ ಎಂದು ಕಛೇರಿಯಲ್ಲಿ ರುವ ಗಣೇಶ್ ಕಾರ್ಣಿಕನ 60% ಬಜರಂಗಿ ಪೋಲಿಸರನ್ನು ನಂಬಿ ನೀವು ಹೇಳುವುದಾದರೆ ,100 ಮೀಟರ್ ಅಂತರದಲ್ಲಿ ಪಾಪ್ಯುಲರ್ ಫ್ರಂಟ್ ನ ಕಛೇರಿಯು ಇದೆ,ನೆನಪಿರಲಿ ಎಂದು ಎಚ್ಚರಿಸಿದರು. ಸಂಘಪರಿವಾರದ ವಿರುದ್ಧದ ಹೋರಾಟಕ್ಕೆ ಪ್ರತಿಭಟನೆಯಲ್ಲ ಪ್ರತಿರೋಧವೇ ಮದ್ದು” ಎಂದು ಅಕ್ರೋಶ ವ್ಯಕ್ತಪಡಿಸಿದರು.
ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಕೇರಳ ರಾಜ್ಯ ಉಪಾಧ್ಯಕ್ಷರಾದ ಮಜೀದ್ ಕಾಸಿಮಿ ಮಾತನಾಡಿ “ಸಂಘಪರಿವಾರ ವರ್ಣಾಶ್ರಮ ಪದ್ದತಿಯ ಮೂಲಕ ದೇಶವನ್ನು ಬ್ರಾಹ್ಮಣದ ಕಡೆಗೆ ಕೊಂಡೊಯ್ದು ಜಾತ್ಯಾತೀತ ಹಿಂದು,ಮುಸ್ಲಿಂ ಸಿಖ್ ಹಾಗೂ ಕ್ರೈಸ್ತರನ್ನು ದೇಶದಿಂದ ಇಲ್ಲವಾಗಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಪಾಪ್ಯುಲರ್ ಫ್ರಂಟ್ ಅವಕಾಶ ನೀಡುವುದಿಲ್ಲ. ಶಾಂತಿ ಸೌಹಾರ್ದತೆಗೆ ಧಕ್ಕೆ ಯಾಗುತ್ತಿರುವ ಸಂಘಪರಿವಾರದ ಫ್ಯಾಶಿಸಂ ನ್ನು ಹಿಮ್ಮೆಟ್ಟಿಸಲು ಮೌನದಿಂದ ಮತ್ತು ಬರೀ ಪ್ರಾರ್ಥನೆಯಿಂದ ಮಾತ್ರ ಸಾಧ್ಯವಿಲ್ಲ, ಇದಕ್ಕೆ ಮಿಗಿಲಾಗಿ ಒಂದು ಹೋರಾಟದ ಅಗತ್ಯವಿದೆ.” ಎಂದರು. ಸಾಹಿತಿ ಬರಹಗಾರ ಇಸ್ಮತ್ ಫಜೀರ್ ಮಾತನಾಡಿ “ಪಾಪ್ಯುಲರ್ ಫ್ರಂಟ್ ಅನ್ಯಾಯದ ವಿರುದ್ಧ ಮತ್ತು ವಿಮೋಚನೆಯ ಪರವಾಗಿ ಹೋರಾಟ ಮಾಡುತ್ತಿದೆ, ಹಾಗಾಗಿ ನಾನು ಈ ಸಂಘಟನೆಯ ಸಂಗಾತಿ ಎಂದು ಹೇಳಿ ಕೊಳ್ಳಲು ಹೆಮ್ಮೆ ಪಡುತ್ತೇನೆ” ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಝಕರಿಯ ಗೋಳ್ತಮಜಲು, ಬಂಟ್ವಾಳ ತಾಲೂಕು ಅಧ್ಯಕ್ಷರಾದ ಸಲೀಂ ಕುಂಪನಮಜಲು, ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಮುಸ್ತಫಾ ಗುರವಾಯಣಕೆರೆ, ಮಂಗಳೂರು ನಗರ ಅಧ್ಯಕ್ಷರಾದ ಖಾದರ್, ಮಂಗಳೂರು ಗ್ರಾಮಾಂತರ ಅಧ್ಯಕ್ಷರಾದ ನವಾಝ್ ಕಾವೂರು, ವಿಟ್ಲ ವಲಯ ಅಧ್ಯಕ್ಷರಾದ ರಹೀಮ್ ಆಲಂಪಾಡಿ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಮೊಹಿದ್ದೀನ್ ಸ್ವಾಗತಿಸಿದರು, ಪಿಎಫ್ಐ ಪುತ್ತೂರು ಅಧ್ಯಕ್ಷರಾದ ಜಾಬಿರ್ ಅರಿಯಡ್ಕ ಧನ್ಯವಾದಗೈದರು. ಝಾಹಿದ್ ಮಲರ್ ಕಾರ್ಯಕ್ರಮ ನಿರೂಪಿಸಿದರು.