ಸಂಪಾಜೆ: ಟೆಂಪೊ ಟ್ರಾವೆಲರ್ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಸಂಪಾಜೆ ಗೂನಡ್ಕ ಸಮೀಪದ ಪೆಲ್ತಡ್ಕದ ತಿರುವಿನಲ್ಲಿ ಮಧ್ಯರಾತ್ರಿ ಸಂಭವಿಸಿದೆ.
ಸವಣೂರಿನಿಂದ ವಿರಾಜಪೇಟೆ ಕಡೆಗೆ ತೆರಳುತ್ತಿದ್ದ ಟೆಂಪೊ ಟ್ರಾವೆಲರ್ ಗೂಡ್ಸ್ ಗಾಡಿಗೆ ಸಂಪಾಜೆ ಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಬೈಕ್ ಪರಸ್ಪರ ಡಿಕ್ಕಿಯಾಗಿ ಸವಾರ ಸುಳ್ಯ ಕಸಬಾ ದುಗ್ಗಲಡ್ಕ ಕಂದಡ್ಕ ವಿನೋದ್ ಕುಮಾರ್ (23) ಮೃತ ಪಟ್ಟ ಘಟನೆ ವರದಿಯಾಗಿದೆ.
ಗೂನಡ್ಕ ಸಮೀಪ ಪೆಲ್ತಡ್ಕದ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.