ಮಾಣಿ : ನಮಾಝ್ ಮಾಡದ ವ್ಯಕ್ತಿ ನಡೆದಾಡುವಾಗ ಆತನ ನೆರಳು ಬಿದ್ದ ಕಡೆ ಬರ್ಕತ್ ನಷ್ಟಹೊಂದಿದ ಚರಿತ್ರೆ ಇದೆ ಇನ್ನು ನಮಾಝ್ ಮಾಡದ ಸತ್ಯವಿಶ್ವಾಸಿಯೊಬ್ಬ ಮನೆಯಲ್ಲಿದ್ದರೆ ಸಾಕು ಸರ್ವ ಸಂಕಷ್ಟಗಳಿಗೆ ಆತನಿಗಿಂತ ಬೇರೆ ಸಿಹ್ರ್ ಬೇಕಾಗಿಲ್ಲ ಎಂದು ಶೈಖ್ ಜೀಲಾನಿಯವರ ಚರಿತ್ರೆಯೊಂದನ್ನು ವಿವರಿಸುತ್ತಾ ಪ್ರಸ್ತುತ ಘಟನೆಯನ್ನು ಹಕೀಂ ಮದನಿ ಪಾಂಡವರಕಲ್ಲು ಹೇಳಿದರು.
ಅವರು ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಜೀಲಾನಿ ಅನುಸ್ಮರಣೆ ಪ್ರಯುಕ್ತ ಆಯೋಜಿಸಿದ ಕುತುಬಿಯ್ಯತ್ ರಾತೀಬ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಹಿತವಚನ ನೀಡಿದರು,ಕೆಸಿಎಫ್ ರಿಯಾದ್ ಝೋನ್ ಸಂಘಟನಾ ಚೆಯರ್ಮೆನ್ ಮುಸ್ತಫಾ ಸಅದಿ ಸೂರಿಕುಮೇರು ದುಆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಎಸ್‌ವೈಎಸ್ ನಾಯಕರಾದ ಯೂಸುಫ್ ಹಾಜಿ ಸೂರಿಕುಮೇರು, ಹಂಝ ಸೂರಿಕುಮೇರು,ಅಬ್ದುಲ್ ಕರೀಂ ಸೂರಿಕುಮೇರು,ಇಬ್ರಾಹಿಂ ಮಾಣಿ,ಫತ್ತಾಹ್ ಮಾಣಿ,ಅಶ್ರಫ್ ಪಾರ್ಪಕಜೆ,ಲತೀಫ್ ಮಾಣಿ,ಮುಂತಾದವರು ಉಪಸ್ಥಿತರಿದ್ದರು, ಸಲೀಂ ಮಾಣಿ ಸ್ವಾಗತಿಸಿದರು, ಇಮ್ರಾನ್ ಸೂರಿಕುಮೇರು ಧನ್ಯವಾದಗೈದರು.