dtvkannada

ಬೆಳ್ತಂಗಡಿ: ಮರವನ್ನು ಬೆಳೆಸಿ ನಾಡನ್ನು ಉಳಿಸಿ ಹಾಗೂ ಸಾವಯವ ಕೃಷಿ ಪದ್ದತಿಯನ್ನು ಸ್ಥಾಪಿಸುವ ಸಂಕಲ್ಪ ಹೊಂದಿರುವ ಎಆರ್ ಆಮನ್ ನೆಲ್ಯಾಡಿ ಇವರ ಮಾಲಕತ್ವದ ಮಾನ್ಸೂನ್ ರೆವಲೂಷನ್ ಆಫ್ ಇಂಡಿಯಾ ಇದರ ಸಹಭಾಗಿತ್ವದಲ್ಲಿ ಕರ್ನಾಟಕದಲ್ಲಿಯೇ ಆತ್ಯಂತ ಕಡಿಮೆ ದರದಲ್ಲಿ ಅಡಿಕೆ ತೆಂಗು ಹಾಗು ಎಲ್ಲ ರೀತಿಯ ಕೃಷಿ ಚಟುವಟಿಕೆಗಳಿಗೆ ಅತ್ಯಂತ ಉತ್ತಮ ಫಲಿತಾಂಶವನ್ನು ನೀಡುವ ಇಂಡ್ ಕನೆಕ್ಟ್ ಸಾವಯವ ಕೃಷಿ ಉತ್ಪನ್ನಗಳ ನೂತನ ಕಚೇರಿಯನ್ನು ಇಂದು ಧರ್ಮಸ್ಥಳದಲ್ಲಿ ದೀಪ ಬೆಳಗಿಸಿ ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಲಾಯಿತು.



ನೂತನ ಕಛೇರಿಯನ್ನು ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯ ಮೋನಪ್ಪ ಗೌಡ ಉದ್ಘಾಟನೆಗೈದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀ ಕ್ರಷ್ಣಕಾಂತ್ ಅಯ್ಯಪ್ಪ ಪಾಟೀಲ್, ಸಬ್ ಇನ್ಸ್ಪೆಕ್ಟರ್ ಧರ್ಮಸ್ಥಳ ಠಾಣೆ, ಶ್ರೀ ಕೇಶವ ಪಿ ಬೆಳಾಲು, ಸದಸ್ಯರು ಎಪಿಎಂಸಿ ಬೆಳ್ತಂಗಡಿ, ಡಾ:ದೇವಿಪ್ರಸಾದ್ ಬೊಲ್ಮ್, ಉಪಾಧ್ಯಕ್ಷರು ಕರ್ನಾಟಕ ಲಗೋರಿ ಅಸೋಸಿಯೇಷನ್ ಬೆಂಗಳೂರು, ಪ್ರೊಫೆಸರ್ ಡಾ. ಗೋವರ್ಧನ್ ರಾವ್ ಅಧ್ಯಕ್ಷರು ರೋಟರಿ ಕ್ಲಬ್ ಮೊಡಂಕಾಪು, ಶ್ರೀ ರಾಮಾನಂದ ಶೆಟ್ಟಿ, ಅಧ್ಯಕ್ಷರು ಇಂಟಕ್ ಬೆಳ್ತಂಗಡಿ ತಾಲ್ಲೂಕು, ಶ್ರೀ ಶ್ರೀಧರ ಪಾಟೀಲ್, ಧಾರವಾಡ ಇಂಡ್ ಕನೆಕ್ಟ್ ಕರ್ನಾಟಕ ರಾಜ್ಯ ಉಸ್ತುವಾರಿ, ಶ್ರೀ ಫೈಝಲ್ ರಹ್ಮಾನ್, ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ, ಪ್ರಕಾಶ್ ದಾವಣೆಗೆರೆ, ಶ್ರೀ ರಹೀಮ್ ಪಿ. ಎ, ಕಾರ್ಯದರ್ಶಿ ರೋಟರಿ ಕ್ಲಬ್ ಮೊಡಂಕಾಪು, ಶ್ರೀ ಅಬ್ಬಾಸ್, ವಿತರಕರು ಇಂಡ್ ಕನೆಕ್ಟ್ ಮಂಗಳೂರು ಹಾಗೂ ಉಧ್ಯಮಿಗಳಾದ ಸಿರಾಜುದ್ದೀನ್ ಪರ್ಲಡ್ಕ, ಶರೀಫ್ ಆಬ್ಬಾಸ್ ವಲಾಲ್, ರಫೀಕ್ ನೆಲ್ಯಾಡಿ ,ಜಾಪು ಸವನೂರು, ಸರ್ಫರಾಜ್ ವಲಾಲ್, ಮುಸ್ತಕ್ ಎನ್ಕೆ ಆಗಮಿಸಿ ಶುಭಹಾರೈಸಿದರು.

ಕರೆ ಮಾಡಿ
8151926999

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ
8151926999

By dtv

Leave a Reply

Your email address will not be published. Required fields are marked *

error: Content is protected !!