dtvkannada

ಉಪ್ಪಿನಂಗಡಿ: 3 ದಿನಗಳ ಹಿಂದೆ ಈಜಲೆಂದು ನದಿಗಿಳಿದ ವ್ಯಕ್ತಿಯೋರ್ವರು ಬೊಲ್ಲಾರು ಸಮೀಪ ನೀರುಪಾಲಾಗಿದ್ದು ಯುವಕನ ಪತ್ತೆಗಾಗಿ ಶೋಧ ಕಾರ್ಯಾಚರಣೆ ಇಂದು ಕೂಡ ಮುಂದುವರೆದಿದೆ.
ಕಳೆದ ಮೂರು ದಿನಗಳಿಂದ ನಿರಂತರವಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪ್ರಯತ್ನ ಪಡುತ್ತಿದ್ದರು ಫಲ ಮಾತ್ರ ಶೂನ್ಯವಾಗಿದೆ.
ಇಲ್ಲಿಯವರೆಗೆ ಮೃತದೇಹ ಸಿಕ್ಕಿಲ್ಲ.ಖಾಸಗಿ ಬೋರ್ ವೆಲ್ ಒಂದರಲ್ಲಿ ಕೆಲಸಕ್ಕಿದ್ದ ಯುವಕರು ಮೊನ್ನೆ ಡಿಸೆಂಬರ್ 1 ರಂದು 5 ಮಂದಿ ಸಹೋದ್ಯೋಗಿಗಳು ಜೊತೆಯಾಗಿ ಈಜಲು ತೆರಳಿದ್ದು ಅದರಲ್ಲಿ ಓರ್ವ ನೀರಿನ ಸೆಳೆತಕ್ಕೆ ನೀರುಪಾಲಾಗಿದ್ದರು.ಅಗ್ನಿ ಶಾಮಕ ದಳದಿಂದ ತೀವ್ರ ಶೋಧ ನಡೆಯುತ್ತಿದ್ದು ಇಂದಿಗೆ ಮೂರು ದಿನವಾದರು ಮೃತದೇಹ ಪತ್ತೆಯಾಗಿಲ್ಲ.

ವೀಕ್ಷಣೆಗೆ ಜಮಾಯಿಸಿದ ಹಲವಾರು ಮಂದಿಗಳು
ನದಿಯಲ್ಲಿ ಮೊಸಳೆಗಳಿರುವ ವದಂತಿಗಳಿವೆ ದಿನ ಮೂರು ದಿನಗಳಾದರೂ ಮೃತ ದೇಹ ಸಿಕ್ಕಿಲ್ಲ,
ಮೊಸಳೆಯ ಬಾಯಿ ಸೇರಿರಬಹುದೇ ಎಂಬುವುದು ನೆರೆದ ಸಾರ್ವಜನಿಕರ ಸಂಶಯದ ಮಾತು ಮೃತದೇಹ ಆದಷ್ಟು ಬೇಗ ಸಿಗಲಿ ಎನ್ನುವುದೇ ಅಲ್ಲಿರುವವರ ಪ್ರಾರ್ಥನೆ.

By dtv

Leave a Reply

Your email address will not be published. Required fields are marked *

error: Content is protected !!