dtvkannada

ಉಪ್ಪಿನಂಗಡಿ: ಈಜಲೆಂದು ನದಿಗಿಳಿದ ವ್ಯಕ್ತಿಯೋರ್ವರು 3 ದಿನಗಳ ಹಿಂದೆ ಬೊಲ್ಲಾರು ಸಮೀಪ ನೀರುಪಾಲಾಗಿದ್ದರು.
ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆದಿದ್ದು ಇಂದು ಬೆಳಿಗ್ಗೆ ವ್ಯಕ್ತಿಯ ಶವ ಪತ್ತೆಯಾಗಿದೆ.



ಮೃತಪಟ್ಟವನನ್ನು ಸುಕ್ಮೋ ರಾಮ್ ಗೋವಡೆ ಎಂದು ಗುರುತಿಸಲಾಗಿದೆ.
ಚತ್ತೀಸ್ ಘಡ ಮೂಲದವರಾಗಿದ್ದು ಖಾಸಗಿ ಬೋರ್ ವೆಲ್ ಒಂದರಲ್ಲಿ ಕೆಲಸಕ್ಕಿದ್ದರು.
ಮೊನ್ನೆ 5 ಮಂದಿ ಸಹೋದ್ಯೋಗಿಗಳ ಜೊತೆ ಈಜಲು ತೆರಳಿದ್ದು ಅದರಲ್ಲಿ ಓರ್ವ ನೀರಿನ ಸೆಳೆತಕ್ಕೆ ನೀರುಪಾಲಾಗಿದ್ದರು.


ಇಂದು ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.ನಿನ್ನೆ ಈ ಬಗ್ಗೆ ಡಿಟಿವಿ ನ್ಯೂಸ್ ತಂಡ ಉಪ್ಪಿನಂಗಡಿಯಿಂದ ನೇರಾ ನೇರ ಗ್ರೌಂಡ್ ರಿಪೋರ್ಟ್ ನೀಡಿತ್ತು.

By dtv

Leave a Reply

Your email address will not be published. Required fields are marked *

error: Content is protected !!