ಬಂಟ್ವಾಳ: ಕಾಸರಗೋಡಿನ ಜ್ಯುವೆಲ್ಲರಿಯಿಂದ ಕೋಟ್ಯಾಂತರ ಮೌಲ್ಯದ ವಜ್ರಾಭರಣ ಕಳವು ಪ್ರಕರಣ ಸಂಬಂಧಿಸಿದಂತೆ ಪೊಲೀಸ್ ತನಿಖೆಯು ಚುರುಕುಗೊಳ್ಳುತ್ತಿದ್ದು, ಆರೋಪಿಯಾದ ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಬಂಟ್ವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಮೊಹಮ್ಮದ್ ಫಾರೂಕ್ ಮತ್ತು ಸಹೋದರನ ಬ್ಯಾಂಕ್ ಖಾತೆ ಮುಟ್ಟುಗೋಲು ಮಾಡಿದ್ದಾಗಿ ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ.
ಕಾಸರಗೋಡಿನ ವಿದ್ಯಾನಗರ ದಲ್ಲಿ ಆರೋಪಿಯ ಬ್ಯಾಂಕಿನಲ್ಲಿ 15 ಲಕ್ಷದ ಸ್ವರ್ಣಭರಣ ಈಡು ನೀಡಿದ್ದನ್ನು ಕಂಡುಹಿಡಿಯಲಾಗಿದೆ ಎಂದು ತನಿಖಾ ಅಧಿಕಾರಿಗಳು ಮುಂಚಿತವಾಗಿ ಹೇಳಿದ್ದರು. ಇದಾದ ನಂತರ ಬ್ಯಾಂಕ್ ಖಾತೆ ಮುಟ್ಟುಗೋಲು ಮಾಡಲಾಗಿದೆ.
ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ ತನಿಖೆಯು ನಡೆಯುತ್ತಿದ್ದು, ಈತನನ್ನು ಕಂಡುಹಿಡಿಯಲು ಇತರ ರಾಜ್ಯಗಳಲ್ಲಿ ಕೂಡ ತೀವ್ರ ತನಿಖೆಯನ್ನು ನಡೆಸಲಾಗುತ್ತಿದ್ದು, ಅರೋಪಿಯು ವಿದೇಶಕ್ಕೆ ಪರಾರಿಯಾಗುವ ಸಾದ್ಯತೆಗಳು ಹೆಚ್ಚಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.