ಉಪ್ಪಿನಂಗಡಿ:ನೆಕ್ಕಿಲಾಡಿ ಸಮೀಪದ ಬೊಳ್ಳಾರು ಎಂಬಲ್ಲಿ ನದಿ ತೀರದಲ್ಲಿ ಸ್ನಾನ ಮಾಡಲು ಹೋದ ಐವರು ಬೋರುವೇಲ್ ಕಾರ್ಮಿಕರ ಪೈಕಿ ಸುಕ್ಮೊ ರಾಮ್ ಗೋವಡೆ ಎನ್ನುವ ವ್ಯಕ್ತಿ ನದಿ ನೀರಿನಲ್ಲಿ ಕೊಚ್ಚಿ ಹೋಗಿ ಕಣ್ಮರೆಯಾಗಿದ್ದು, ಕಳೆದ ಎರಡು ದಿನಗಳಿಂದ ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ನಿರಂತರವಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.
ಇಂದು ಮುಂಜಾನೆ ಬಿಳಿಯೂರು ಸಮೀಪದ ಕರಿಂಜೆ ಎಂಬಲ್ಲಿ ಮೃತ ದೇಹ ಪತ್ತೆಯಾಗಿದ್ದು, ಹನೀಫ್ ಬಿಳಿಯೂರು ನೇತೃತ್ವದ ಉಪ್ಪಿನಂಗಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರೆಸ್ಕ್ಯೂ & ರಿಲೀಫ್ ಟೀಮ್ ಮೃತದೇಹವನ್ನು ಮೇಲಕ್ಕೆತ್ತಿದ್ದು, ಎಸ್‌ಡಿಪಿಐ ಆಂಬ್ಯುಲೆನ್ಸ್ ಮೂಲಕ ಸ್ಥಳೀಯ ಸರಕಾರಿ ಆಸ್ಪತ್ರೆಗೆ ರವಾನಿಸಲಾಯಿತೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ತಂಡದವರು ತಿಳಿಸಿದ್ದಾರೆ.