';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಗ್ರಾ ಕೂಳೂರು ಗೋಲ್ಡ್ ಫಿಂಚ್ ಗ್ರೌಂಡ್ ಬಳಿ ತಲವಾರು ಝಳಪಿಸಿ ದನ ಕಳವು ಮಾಡಿದ ಆರೋಪಿಗಳನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಕಳವು ಮಾಡಲು ಬಳಸಿದ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನ ಜೊತೆಗೆ ಆರೋಪಿಗಳಾದ ಮೊಹಮದ್ ಸಲೀಂ (32), ಮೊಹಮದ್ ತಂಜಿಲ್ ((25) ಮೊಹಮದ್ ಇಕ್ಬಾಲ್ (23) ಹಾಗೂ ಅಫ್ರಿದಿ ಎಂಬವರನ್ನು ಬಂಧಿಸಿದ್ದಾರೆ.
ನಿನ್ನೆ ಮುಂಜಾನೆ 4.30ಕ್ಕೆ ಉಮೇಶ್ ಮಲರಾಯಸಾನ ಮತ್ತು ಉದಯ ಶೆಟ್ಟಿ ಎಂಬವರ ಮೇಯಲು ಬಿಟ್ಟ 3 ದನಗಳನ್ನು ಮಾರಕಾಸ್ತ್ರ ಹಿಡಿದು ಝಳಪಿಸುತ್ತಾ ಆರೋಪಿಗಳು ದನವನ್ನು ಕದ್ದೊಯ್ದಿದ್ದರು.
ಪ್ರಕರಣವನ್ನು ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಎಸಿಪಿ ಮಹೇಶ್ ಕುಮಾರ್ ರವರ ಸಲಹೆಯಂತೆ ಕಾವೂರು ಠಾಣಾ ಅಧಿಕಾರಿ ಸಿಬ್ಬಂದಿ, ಮೂಡಬಿದ್ರೆ ಠಾಣಾ ಅಧಿಕಾರಿ ಸಿಬ್ಬಂದಿ, ಬಜಪೆ ಠಾಣಾ ಅಧಿಕಾರಿ ಸಿಬ್ಬಂದಿ ಬೇಧಿಸಿದ್ದಾರೆ.