ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪದ ಅಡ್ಯಂತಡ್ಕ ಎಂಬಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಅನ್ಯಕೋಮಿನ ಕಿಡಿಗೇಡಿಗಳ ಗುಂಪಿನಿಂದ ಹಲ್ಲೆ ನಡೆದ ಬಗ್ಗೆ ಇದೀಗ ವರದಿಯಾಗಿದೆ.
ಹಲ್ಲೆಗೊಳಗಾದ ಯುವಕರನ್ನು ಉಪ್ಪಿನಂಗಡಿ ಸಮೀಪ ನಿವಾಸಿಗಳಾದ ಫಯಾಝ್, ಅಫೀಝ್, ಝಕರಿಯಾ ಇಳಂತಿಲ, ಸಿದ್ದೀಕ್ ಹಾಗೂ ಅಯ್ಯೂಬ್ ಎಂದು ಗುರುತಿಸಲಾಗಿದೆ.
ಇಳಂತಿಲ ಪ್ರದೇಶದಲ್ಲಿ ಇದ್ದ ಹಫೀಜ್ ಮತ್ತು ಫಯಾಝ್ ಮೇಲೆ ಮೊದಲು ದಾಳಿ ನಡೆಸಿದ್ದ ತಂಡ , ಇವರಿಬ್ಬರು ತಪ್ಪಿಸಿಕೊಂಡ ಬಳಿಕ ಝಕರಿಯಾ , ಸಿದ್ದೀಕ್ ಮತ್ತು ಅಯ್ಯಬ್ ಎಂಬ ಮೂವರು ಯುವಕರ ಮೇಲೆ ಮತ್ತೆ ತಲವಾರು ದಾಳಿ ನಡೆಸಿತು ಎನ್ನಲಾಗಿದೆ . ಝಕಾರಿಯಾ , ಸಿದ್ದೀಕ್ ಮತ್ತು ಅಯೂಬ್ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ .
ದಾಳಿಗೊಳಗಾದ ಯುವಕರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ . ತಲೆ ಮತ್ತು ಕೈ ಗೆ ಗಂಭೀರ ಗಾಯಗೊಂಡಿದ್ದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.