ಉಪ್ಪಿನಂಗಡಿ: ಮೊನ್ನೆಯಿಂದ ಅಹಿತಕರ ಘಟನೆಗಳು ಉಪ್ಪಿನಂಗಡಿಯಲ್ಲಿ ಮರುಕಳಿಸುತ್ತಿದ್ದು ಇದು ಖೇದಕರ.
ತಕ್ಷಣವೇ ಆರೋಪಿಗಳನ್ನು ಬಂಧಿಸಬೇಕು ಮತ್ತು ಸೂಕ್ತ ತನಿಖೆ ನಡೆಸಬೇಕೆಂದು SDPI ಉಪ್ಪಿನಂಗಡಿ ಬ್ಲಾಕ್ ಸಮಿತಿ ವತಿಯಿಂದ ಇಂದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿ ಮನವಿ ಮಾಡಲಾಯಿತು.
ಇದೇ ವೇಳೆ ಪೊಲೀಸ್ ಅಧಿಕಾರಿಗಳು ಮಾತನಾಡಿ ನಿಮ್ಮ ಸಹಕಾರ ನಮಗೆ ಅತ್ಯಗತ್ಯ ಯಾವುದೇ ಕಾನೂನುಗಳನ್ನು ಕೈಗೆತ್ತಿಕೊಳ್ಳದೇ ಸಹಕರಿಸಿ ಖಂಡಿತಾ ನಾವು ಆರೋಪಿಗಳನ್ನು ಬಂದಿಸುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ
SDPI ಪುತ್ತೂರು ತಾಲೂಕು ಅಧ್ಯಕ್ಷ ಇಬ್ರಾಹಿಂ ಸಾಗರ್ ಕರಾವಳಿಯಲ್ಲಿ ಮುಂದುವರಿದ ಕೋಮು ಗಲಭೆ
ಇವೆಲ್ಲವೂ ಸಂಘಪರಿವಾರದ ಅಜೆಂಡಾದ ರೀತಿ ನಡೆಯುತ್ತಿದೆ.
ಇದು ಸಮಾಜಕ್ಕೆ ಹಾನಿಕಾರವಾಗಿದ್ದು ತಕ್ಷಣವೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಹೇಳಿದರು.
ತದ ನಂತರ ಮಾತನಾಡಿದ SDPI ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ನಿಝಾರ್ ಕುದ್ರಡ್ಕ
ಉಪ್ಪಿನಂಗಡಿಯಲ್ಲಿ ನಡೆದ ಎರಡೂ ಘಟನೆಗಳನ್ನು ತೀವ್ರವಾಗಿ ಖಂಡಿಸುತ್ತೇವೆ, ಸಮಾಜದ ಸ್ವಾಸ್ಥ್ಯ ಹೆದಗಡುವೆ ಯಾವನೇ ಆದರೂ ರಾಜಕೀಯ ಕುಮ್ಮಕ್ಕು ನೀಡದೇ ಬಂಧಿಸಬೇಕು ಇಲ್ಲದಿದ್ದಲ್ಲಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಅಶಾಂತಿಯ ವಾತಾವರಣವ ಮನಗಂಡು ಇಂದು SDPI ಆಯೋಜಿಸಿದ ಪ್ರತಿಭಟನೆಯನ್ನು ಕೈ ಬಿಟ್ಟು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ತೆರಳಿ ಸೂಕ್ತ ತನಿಕೆ ಮತ್ತು ಆರೋಪಿಗಳನ್ನು ಬಂಧಿಸಲು ಮನವಿ ಮಾಡಲಾಯಿತು.