ಕಲ್ಲಡ್ಕ: ಝಾಮಾನ್ ಬಾಯ್ಸ್ ಕಲ್ಲಡ್ಕ (ರಿ) ಮತ್ತು ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಜಂಟಿ ಆಶ್ರಯದಲ್ಲಿ ಫಾದರ್ ಮುಲ್ಲರ್ ಬ್ಲಡ್ ಬ್ಯಾಂಕ್ ಕಂಕನಾಡಿ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ದಿನಾಂಕ 5/12/2021 ಆದಿತ್ಯವಾರ ಬೆಳಿಗ್ಗೆ 9:00ರಿಂದ ಮಧ್ಯಾಹ್ನ 1:30 ರ ತನಕ ಸರ್ಕಾರಿ ಶಾಲೆ ಕಲ್ಲಡ್ಕ ಇದರ ಸಭಾಂಗಣದಲ್ಲಿ ಬಹಳಾ ಯಶಸ್ವಿಯಾಗಿ ನಡೆಯಿತು.
ಈ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪಂಡಿತರು, ಊರಿನ ಹಿರಿಯ ನಾಯಕರು ಮತ್ತು ಸ್ಥಳೀಯ ಮುಖಂಡರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಝಮಾನ್ ಬಾಯ್ಸ್ ಕಲ್ಲಡ್ಕ ಇದರ ನೂತನ ಸಮವಸ್ತ್ರ ಬಿಡುಗಡೆಗೊಳಿಸಲಾಯಿತು.
ಸುಮಾರು 65 ಕ್ಕೂ ಹೆಚ್ಚು ರಕ್ತದಾನಿಗಳು ಬಂದು ರಕ್ತದಾನ ಮಾಡಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.