ಉಪ್ಪಿನಂಗಡಿ: ಕರಾವಳಿಯಲ್ಲಿ ತ್ರಿಶೂಲ ದೀಕ್ಷೆಯಿಂದ ಅಮಾಯಕರ ಮೇಲಿನ ದಾಳಿಯಂತಹ ಘಟನೆಗಳು ಹೆಚ್ಚಾಗುತ್ತಿದ್ದು ಇವೆಲ್ಲವೂ ಸಂಘ ಪರಿವಾರದ ಕುಮ್ಮಕ್ಕು ಉಪ್ಪಿನಂಗಡಿ ಇಳಂತಿಲ ಘಟನೆಯ ಆರೋಪಿಗಳನ್ನು ಸಂರಕ್ಷಿಸುವ ಕೆಲಸ ಇಲ್ಲಿನ ಶಾಸಕರು ನಡೆಸುತ್ತಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿ ಪಾರ್ಟಿ ಆಫ್ ಇಂಡಿಯಾ ಪುತ್ತೂರು ತಾಲೂಕು ಅಧ್ಯಕ್ಷ ಇಬ್ರಾಹಿಂ ಸಾಗರ್ ಇಂದು ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಇಳಂತಿಲ ಘಟನೆಯ 4-5 ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿದ್ದರು ರಾತ್ರೋ-ರಾತ್ರಿ ಪೊಲೀಸರ ಮೇಲೆ ಒತ್ತಡ ಹೇರಿ ಅಪರಾಧಿಗಳನ್ನು ಸ್ಥಳೀಯ ಶಾಸಕರು ಬಿಡಿಸಿಕೊಂಡು ಹೋಗಿದ್ದು ಘಟನೆಯ ಹಿಂದೆ ಶಾಸಕರ ಕೈವಾಡವಿದೆ ಎಂದು ಅವರು ಆರೋಪಿಸಿದರು.
ಇಂತಹ ಕುಕೃತ್ಯಗಳು ಮುಂದುವರೆದರೆ ಮುಂದೆ ದೊಡ್ಡ ಅನಾಹುತಗಳಾಗಬಹುದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಖಂಡಿತಾ ಇದನ್ನು ಸಹಿಸಲು ಸಾಧ್ಯವಿಲ್ಲ ಇದರ ವಿರುದ್ಧ ನ್ಯಾಯಯುತ ಹೋರಾಟ ಮಾಡಲು ಮತ್ತು ಜನರ ಮೇಲೆ ಹಲ್ಲೆಯಂತ ಕೃತ್ಯಗಳು ನಡೆದರೆ ಅದನ್ನು ತಡೆಯಲು ನಾವು ಮುಂದೆ ಬರಬೇಕಾಗುತ್ತದೆ ಎಂದು ಅವರು ಹೇಳಿದರು.
ಒಂದು ವೇಳೆ ಉಪ್ಪಿನಂಗಡಿಯಲ್ಲಿ ನಡೆದ ಎರಡೂ ಘಟನೆಗಳ ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷ್ಯ ತೋರಿಸಿದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.
ತದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ SDPI ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ನಿಝಾರ್ ಕುದ್ರಡ್ಕ ಉಪ್ಪಿನಂಗಡಿ ಸಮೀಪದ ಅಂಡತ್ತಡ್ಕ ಬಳಿ ನಡೆದ ಅಮಾಯಕ ಮುಸಲ್ಮಾನರ ಮೇಲಿನ ಹಲ್ಲೆ ಸಂಘ ಪರಿವಾರದ ಪೂರ್ವ ಯೋಜಿತ ಕೃತ್ಯವಾಗಿದೆ.
ಈ ಘಟನೆ ನಡೆದು ಅದೇ ಊರಿನಲ್ಲಿ 30 ಬೈಕಿನಲ್ಲಿ ಸುಮಾರು 60 ರಷ್ಟು ಜನ ಬಂದು ಪುನಃ 3 ಮಂದಿಗಳ ಮೇಲೆ ತಲ್ವಾರ್ ಗಳಿಂದ ದಾಳಿ ಮಾಡುತ್ತಾರೆ ದಾಳಿಗೊಳಗಾದ ವ್ಯಕ್ತಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಗಳನ್ನು ಬಂಧಿಸಲು ಕಾನೂನಿನಲ್ಲಿ ಹಲವಾರು ದಾರಿಗಳಿವೆ ಇಲಾಖೆಗಳು ಅದನ್ನು ಉಪಯೋಗಿಸದೇ
ರಾಜಕೀಯ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ
ಇಸ್ಮಾಯಿಲ್ ಸಾಲ್ಮರ,
ಬಶೀರ್ ಹಲ್ಯಾರ ಕಡಬ
ಮುಸ್ತಫಾ ಲತೀಫಿ
ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.