';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ದಂಪತಿಗಳಿಬ್ಬರು ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ವಿಷವುಣಿಸಿ, ತಾವು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡು ಹೃದಯವಿದ್ರಾವಕ ಘಟನೆ ಮಂಗಳೂರಿನ ಜೆಪ್ಪು ಮಾರ್ಕೆಟ್ ಬಳಿಯ ಭಗಿನಿ ಸಮಾಜ ಬಳಿ ನಡೆದಿದೆ.
ಮೃತರನ್ನು ನಾಗೇಶ್ ಶೇರಿಗುಪ್ಪಿ (30), ವಿಜಯಲಕ್ಷ್ಮಿ (26), ಮಕ್ಕಳನ್ನು ಸಪ್ನಾ (8), ಸಮರ್ಥ್ (4) ಎಂದು ಗುರುತಿಸಲಾಗಿದೆ.
ತಂದೆ ತನ್ನ ಮಡದಿ ಹಾಗೂ ಮಕ್ಕಳಿಗೆ ವಿಷವುಣಿಸಿ ತಾನು ಮರದ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಇವರು ಮೂಲತಃ ಬಾಗಲಕೋಟೆ ಮೂಲದ ಬಿಳಗಿ ತಾಲೂಕಿನ ಸುನಗ್ ಗ್ರಾಮದವರೆಂದು ತಿಳಿದು ಬಂದಿದೆ.
ನಾಗೇಶ್ ಡ್ರೈವರ್ ಆಗಿ ವೃತ್ತಿ ಕೆಲಸ ಮಾಡುತ್ತಿದ್ದು, ಪತ್ನಿ ವಿಜಯಲಕ್ಷ್ಮೀ ಸೆಕ್ಯೂರಿಟಿ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಭೇಟಿ ನೀಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ.
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಂಬಂಧಿಕರಲ್ಲಿ ದುಃಖ ಮಡುಗಟ್ಟಿದೆ