';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಳ್ಳಾಲ: ದಕ್ಷಿಣ ಕರ್ನಾಟಕದ ಅಜ್ಮೀರ್ ಎಂದೇ ಖ್ಯಾತಿಯಾದ ಉಳ್ಳಾಲ ಉರೂಸನ್ನು ಮುಂದಿನ ಎರಡು ತಿಂಗಳಿಗೆ ಮುಂದೂಡಲು ಆಡಳಿತ ಸಮಿತಿ ತೀರ್ಮಾನ ಕೈಗೊಂಡಿದೆ.
ಇತಿಹಾಸ ಪ್ರಸಿದ್ದ ಉಳ್ಳಾಲ ಉರೂಸ್ ಇದೇ ಬರುವ ಡಿಸೆಂಬರ್ 23ರಿಂದ ಪ್ರಾರಂಭಗೊಳ್ಳಬೇಕಿತ್ತು. ಅದರಂತೆ ಆಡಳಿತ ಸಮಿತಿ ಪ್ರಚಾರ ಕಾರ್ಯವನ್ನೂ ಕೈಗೊಂಡು ಅತಿಥಿಗಳನ್ನೂ ಆಹ್ವಾನಿಸಿತ್ತು. ಇದರ ನಡುವೆ ರಾಜ್ಯದಲ್ಲಿ ಓಮಿಕ್ರಾನ್ ಭೀತಿ ಹಿನ್ನೆಲೆ ಆಡಳಿತ ಸಮಿತಿಯ ಜೊತೆ ಜಿಲ್ಲಾಧಿಕಾರಿ ಮಾತುಕತೆ ನಡೆಸಿ ಉರೂಸನ್ನು ಮುಂದೂಡಲು ಮನವಿ ಮಾಡಿದ್ದರು. ಅದರಂತೆ ಇದೀಗ ಆಡಳಿತ ಸಮಿತಿಯೂ ಉರೂಸನ್ನು ಮುಂದೂಡಿ ತೀರ್ಮಾನ ಕೈಗೊಂಡಿದೆ.