ಪುತ್ತೂರು: AZ ಡೈಲಿ ಫ್ರೆಶ್ & ವೆಜಿಟೇಬಲ್ಸ್ , ಡ್ರೈ ಫ್ರೂಟ್ಸ್ & ಡ್ರೈ ಫಿಶಸ್ ನೂತನ ಮಳಿಗೆ ಪುತ್ತೂರು ಸಮೀಪದ ಕೇಪುಳು ರಾಯಲ್ ಕಾಂಪ್ಸೆಕ್ಸ್’ನಲ್ಲಿ ಇಂದು ಶುಭಾರಂಭಗೊಂಡಿತು.

ನೂತನ ಮಳಿಗೆ ಶುಭಾರಂಭದ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಹಲವು ಜನಸ್ನೇಹಿ ರಕ್ತದಾನಿಗಳು ಆಗಮಿಸಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿ ಜೀವದಾನಿಗಳಾದರು.
ಕಾರ್ಯಕ್ರಮಕ್ಕೆ ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ನಿಝಾಮ್ ಪರ್ಲಡ್ಕ, ಸಂಶುದ್ದೀನ್ ಪರ್ಲಡ್ಕ, ಸಿರಾಜ್ ಜೈ ಭಾರತ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಕಾರ್ಯನಿರ್ವಾಹಕರಾದ ಸಿರಾಜುದ್ದೀನ್ ಪರ್ಲಡ್ಕ, ಸಮೀರ್ ಸೀಕೋ, ಅಲೀ ಪರ್ಲಡ್ಕ, ಫೈಝಾನ್, ಇಮ್ರಾನ್ ಬೈತಾರ್ ಹಾಗೂ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು ಸಿಬ್ಬಂದಿಗಳು ಉಪಸ್ಥಿತರಿದ್ದರು.